ದಾವಣಗೆರೆ, ಜ. 8- ತಾಲ್ಲೂಕು ಎಲೆಬೇತೂರು ಗ್ರಾಮದ ಸೇಂಟ್ ಮದರ್ ತೆರೇಸಾ ಕಾನ್ವೆಂಟ್ ಶಾಲೆಯ ವಾರ್ಷಿಕೋತ್ಸವ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಂಬಾಭವಾನಿ ಮಹಿಳಾ ವಿದ್ಯಾಸಂಸ್ಥೆ ಕಂಬತ್ತಳ್ಳಿ ಅಧ್ಯಕ್ಷರಾದ ಶ್ರೀಮತಿ ವಿ.ಎನ್. ದೇಸ್ಕರ್ ವಹಿಸಿದ್ದರು.
ಶಾಲಾ ಕಾರ್ಯದರ್ಶಿ ಮಂಜುಳಾ ಟಿ. ದೇಸ್ಕರ್ ಪ್ರಾಸ್ತಾವಿಕ ನುಡಿಯಲ್ಲಿ, ಗ್ರಾಮದಲ್ಲಿ 23 ವರ್ಷಗಳಿಂದ ಶಾಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆಲ್ಲ ಗ್ರಾಮಸ್ಥರ ಸಹಕಾರ ಇದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ. ಕರಿಬಸಪ್ಪ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಷಡಕ್ಷರಪ್ಪ ಎಂ. ಬೇತೂರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಪನಳ್ಳಿ ಶ್ರೀಮತಿ ಶಾಂತಮ್ಮ ಬಸವನಗೌಡಪ್ಪ, ಮಾಜಿ ಕಾಡಾ ಸಮಿತಿ ಸದಸ್ಯರಾದ ಎಚ್. ಬಸವರಾಜಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ, ಶಾಲೆಯ ಅಭಿವೃದ್ಧಿ ಕುರಿತು ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಶಿವಕುಮಾರ್, ಜಕ್ಕವರ ಚಂದ್ರಪ್ಪ, ಶ್ರೀಮತಿ ಜಯಮ್ಮ ಮಠದ ಬಸವರಾಜಯ್ಯ, ಶ್ರೀಮತಿ ಲತಾ ಮರಳಸಿದ್ದಾಚಾರ್, ಶ್ರೀಮತಿ ಶಾಂತಮ್ಮ ಮಂಜುನಾಥ್, ಆರ್.ಎ. ದೇಸ್ಕರ್ ಉಪಸ್ಥಿತರಿದ್ದರು.
ಶಾಲೆಯ ಕಾರ್ಯದರ್ಶಿ ಮಂಜುಳಾ, ಡಿ.ದೇಸ್ಕರ್, ಧನುಜ ವಿ. ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.