ದಾವಣಗೆರೆ, ಜ. 8- ನಗರದ ಶ್ರೀ ವೀರಮದಕರಿ ನಾಯಕ ವೃತ್ತದ ಬಳಿಯ ಶ್ರೀ ಕೇದಾರನಾಥ ದೇವಾಲಯ (ಶ್ರೀ ಚಂದ್ರಮೌಳೇಶ್ವರ ದೇವಾಲಯ ಪಕ್ಕ) ದಲ್ಲಿ ಶ್ರೀ ಸ್ವಾಮಿಗೆ ಅಭಿಷೇಕ ಮತ್ತು ಸಂಜೆ ಕಾರ್ತಿಕೋತ್ಸವವನ್ನು ವಿಶೇಷ ಪೂಜೆ ಹಾಗೂ ಅಲಂಕಾರದೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಇಂದೂಧರ್ ನಿಶಾನಿಮಠ್ ಕುಟುಂಬದವರು, ರವೀಂದ್ರನಾಥ್ ಜಾಧವ್ ಸೇರಿದಂತೆ, ಅನೇಕ ಭಕ್ತರು ಪಾಲ್ಗೊಂಡು, ಭಕ್ತಿ ಸಮರ್ಪಿಸಿದರು.