ನಿವೇಶನಕ್ಕೆ ಆಗ್ರಹಿಸಿ ಜನಾಂದೋಲನ ಪ್ರತಿಭಟನೆ

ನಿವೇಶನಕ್ಕೆ ಆಗ್ರಹಿಸಿ ಜನಾಂದೋಲನ ಪ್ರತಿಭಟನೆ

ದಾವಣಗೆರೆ, ಜ. 8- ನಗರದ ವಿವಿಧ ಸ್ಲಂಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ನಿವೇಶನ ರಹಿತ ಬಡವರಿಗೆ ಸರ್ಕಾರದಿಂದ ಭೂಮಿ ಗುರುತಿಸಿ ನಿವೇಶನ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸ್ಲಂಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ನಿವೇಶನ ನೀಡಲು ಮೊದಲ ಆದ್ಯತೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸ್ಲಂ ನಿವಾಸಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿವೇಶನ ನೀಡುವವರೆಗೂ ಧರಣಿ ಸತ್ಯಾಗ್ರಹ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಇದೇ ದಿನಾಂಕ 16 ರಿಂದ  ಸುಮಾರು ಸಾವಿರ ಮಹಿಳೆಯರು  ಮತ್ತವರ ಕುಟುಂಬದವರು  ಧರಣಿಗೆ ಮುಂದಾಗಿದ್ದಾರೆಂದು ಸಂಘಟನೆಯ ಮುಖಂಡರು ಎಚ್ಚರಿಸಿದರು.

ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಿಗೆ ಎಸ್.ಎಲ್. ಆನಂದಪ್ಪ ಮುಖಂಡತ್ವದಲ್ಲಿ ವಿವಿಧ ಬೇಡಿಕೆಗಳಿರುವ ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಎಸ್.ಎಲ್. ಆನಂದಪ್ಪ, ರೇಣುಕ ಯಲ್ಲಮ್ಮ, ಎಂ. ಶಬ್ಬೀರ್ ಸಾಬ್, ಬಾಲಪ್ಪ, ಮುನ್ನಾ ಸಾಬ್, ಚಮನ್ ಸಾಬ್, ಬೀಬಿಜಾನ್  ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!