ದಾವಣಗೆರೆ, ಜ. 7- ನಗರದ ಇಂಪೀರಿಯಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶನಿವಾರ ಸಾಂಪ್ರದಾಯಿಕ ಉಡುಗೆಯಲ್ಲಿ ಕ್ಯಾಂಪಸ್ನಲ್ಲಿ ಕಂಗೊಳಿಸಿದರು. ವಿದ್ಯಾರ್ಥಿನಿಯರು ಸೀರೆ, ಲಂಗ-ದಾವಣಿ ತೊಟ್ಟಿದ್ದರೆ, ವಿದ್ಯಾರ್ಥಿಗಳು ಬಿಳಿ ಪಂಚೆ, ಶರ್ಟ್ ಹೆಗಲ ಮೇಲೊಂದು ಟವೆಲ್ ಧರಿಸಿ ಸಂಭ್ರಮದಿಂದ ಓಡಾಡುತ್ತಾ ಗಮನ ಸೆಳೆದರು. ಅಂದ ಹಾಗೇ ಇದಕ್ಕೆ ವೇದಿಕೆಯಾಗಿದ್ದು, ಸಾಂಪ್ರದಾಯಿಕ ದಿನ (ಎತ್ನಿಕ್ ಡೇ).
ಇಂಪೀರಿಯಲ್ ಪಬ್ಲಿಕ್ ಶಾಲೆಯಲ್ಲಿ ಸಾಂಪ್ರದಾಯಿಕ ದಿನ
