ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿದರೆ ಹೆಚ್ಚಿನ ಸಾಧನೆ

ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿದರೆ ಹೆಚ್ಚಿನ ಸಾಧನೆ

ಮಾಗನೂರು ಬಸಪ್ಪ ಪಿಯು ಕಾಲೇಜಿನ  ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಂಗಮೇಶ್ವರ ಗೌಡರು

ದಾವಣಗೆರೆ, ಜ.7- ನಮ್ಮ ತಂದೆ ಮಾಗನೂರು ಬಸಪ್ಪನವರು ಕೇವಲ 6ನೇ ತರಗತಿ ಓದಿದವರು. ಆದರೂ ಒಂದು ವೈದ್ಯಕೀಯ ವಿಜ್ಞಾನ ಕಾಲೇಜನ್ನೇ ಸಂಸ್ಥಾಪನೆ ಮಾಡಿದರು. ಇನ್ನು ಪ್ರತಿಭಾವಂತ ವಿದ್ಯಾರ್ಥಿಗಳಾದ ನೀವುಗಳೆಲ್ಲಾ ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡಬಹುದು  ಎಂದು  ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‍ನ  ಗೌರವ ಕಾರ್ಯದರ್ಶಿ ಎಂ.ಬಿ ಸಂಗಮೇಶ್ವರ ಗೌಡರು  ಹೇಳಿದರು. 

ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯು ನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದ 116 ವಿದ್ಯಾ ರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾ ರಂಭ ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿ ಗೌಡರು ಮಾತನಾಡಿದರು.

  ಕಾಲೇಜಿನ ನಿರ್ದೇಶಕ  ಡಾ.ಜಿ.ಎನ್.ಹೆಚ್ ಕುಮಾರ್  ಮಾತನಾಡಿ,  ವಿದ್ಯಾರ್ಥಿಗಳು ಸತತ ಅಭ್ಯಾಸಿಗಳಾಗಿರ ಬೇಕು, ಶ್ರಮವಿಲ್ಲದೆ ಯಾವುದೂ ದೊರೆಯುವುದಿಲ್ಲ ಎಂದು ಹೇಳಿದರು. 

ಹಿರಿಯ ಪತ್ರಕರ್ತ – ಸಾಹಿತಿ   ಬಿ.ಎನ್ ಮಲ್ಲೇಶ್ ಮಾತನಾಡಿ, ಅಂಕಗಳನ್ನು ಗಳಿಸುವುದು ಮಾತ್ರವಲ್ಲ, ತಂದೆ-ತಾಯಿಯವರಿಗೆ ನೆರಳಾದಾಗ ಆ ಅಂಕಗಳನ್ನು ಪಡೆದುದು ಸಾರ್ಥಕ ವಾಗುವುದು  ಎಂದು ತಿಳಿಸಿದರು. 

ಟ್ರಸ್ಟ್‌ನ  ಟ್ರಸ್ಟಿ  ಎಂ.ಬಿ ಚಂದ್ರಶೇಖರ ಗೌಡರು ಮಾತನಾಡಿ,  ವಿದ್ಯೆ ಸಾಧಕರ ಸೊತ್ತು, ಸೋಮಾರಿಯ ಸೊತ್ತಲ್ಲ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು.

ಪ್ರಾಚಾರ್ಯ ಡಾ.ಪ್ರಸಾದ್ ಬಂಗೇರ ಸ್ವಾಗತಿಸಿದರು.   ಶ್ರೀಮತಿ  ಸುರೇಖಾ ಜಗದೀಶ್  ವಾರ್ಷಿಕ ವರದಿ ವಾಚಿಸಿದರು. ಕು.ಹರ್ಷಿತಾ ಎಂ. ಭರತನಾಟ್ಯ ಪ್ರದರ್ಶನ ಮಾಡಿದರು. ಕು.ಸಂಜನಾ ಎನ್.ಎಂ.ಎಸ್ ಗಿಟಾರ್ ವಾದ್ಯ ನುಡಿಸಿದರು. 

ಉಪನ್ಯಾಸಕರಾದ ಎಸ್.ಆರ್ ಸಿದ್ದೇಶ್, ಎನ್.ಎಂ ಪ್ರಶಾಂತ್, ದೀಪ ಹೆಚ್.ಜಿ ಮತ್ತು ಸಿ.ಎಂ ಸಂಪತ್ ಕುಮಾರ್ ಮತ್ತು ಚಂದನ್ ಬಿ ಅವರುಗಳು   ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಮಮತ ರೊನಾಲ್ಡ್     ನಿರೂಪಣೆ ಮಾಡಿದರು.  ಯಶವಂತ ಕುಮಾರ್ ಜೆ.ಆರ್ ವಂದಿಸಿದರು.

error: Content is protected !!