ಸ್ವ ಉದ್ಯೋಗ ಪ್ರಾರಂಭದಿಂದ ಆರ್ಥಿಕ ಸಬಲರಾಗಿ

ಸ್ವ ಉದ್ಯೋಗ ಪ್ರಾರಂಭದಿಂದ ಆರ್ಥಿಕ ಸಬಲರಾಗಿ

ಕಡ್ಲೆಬಾಳ್ : ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಧನಂಜಯ ಕಡ್ಲೆಬಾಳ್

ದಾವಣಗೆರೆ, ಜ. 5- ಗ್ರಾಮೀಣ ಪ್ರದೇಶದ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ಸಹ ಕಾರಿ ಯಾಗುವಂತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಯುವಕರು ಜಾಗೃತರಾಗಿ ಸ್ವಯಂ ಉದ್ಯೋಗ ಪ್ರಾರಂಭಿಸು ವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಬಿಜೆಪಿ ಮುಖಂಡ ಧನಂಜಯ ಕಡ್ಲೇಬಾಳ್ ಕರೆ ನೀಡಿದರು.

ಕಡ್ಲೆಬಾಳ್ ಗ್ರಾಮದಲ್ಲಿ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮದಲ್ಲಿ 2024ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರೈತರು ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳ ಪ್ರಯೋಜನ ಪಡೆದು ಅಧಿಕ ಇಳುವರಿ ಪಡೆಯುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಮತ್ತು ವಿಷ ಮುಕ್ತ ಆಹಾರ ಉತ್ಪಾದನೆಗಾಗಿ ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಪಾಲಿಸಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳಿದ್ದು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ನೈಸರ್ಗಿಕ ಕೃಷಿಯ  ಪ್ರಾತ್ಯಕ್ಷಿಕೆಗಳನ್ನು ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರು ವೀಕ್ಷಿಸಬಹುದಾಗಿದೆ. ಮಣ್ಣು ಪರೀಕ್ಷೆ ಅತ್ಯಂತ ಅವಶ್ಯವಾಗಿದ್ದು ಎಲ್ಲಾ ರೈತರು ಮಣ್ಣು ಪರೀಕ್ಷೆ ಮಾಡಿಸಿ ಶಿಫಾರಸ್ಸು ಮಾಡಿದ ಗೊಬ್ಬರಗಳನ್ನು ಬಳಸಬೇಕು. ಇದರಿಂದ ಹೆಚ್ಚಿನ ಗೊಬ್ಬರ ಉಪಯೋಗಿಸಿ ನಷ್ಟ ಅನುಭವಿಸುವುದನ್ನು ತಪ್ಪದೇ ಹಾಗೂ ಪರಿಸರ ಸಂರಕ್ಷಣೆಯನ್ನು ಮಾಡಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡ ಕೊಳೇನ ಹಳ್ಳಿ ಬಿ ಎಂ ಸತೀಶ್, ಕಡ್ಲೇಬಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ವರಪ್ಪ, ಸದಸ್ಯರಾದ ಎ.ಕೆ. ರಾಮಪ್ಪ, ಎ.ಕೆ. ಪರಮೇಶ್ವರಪ್ಪ, ಭೀಮನಾಯ್ಕ ಓಬಜ್ಜಿಹಳ್ಳಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಅಕ್ಕಮಹಾದೇವಿ, ವೈದ್ಯಾಧಿಕಾರಿ ಕಿಶೋರಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!