ಹಳೇಪೇಟೆ ಸ.ಹಿ.ಪ್ರಾ. ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ

ಹಳೇಪೇಟೆ ಸ.ಹಿ.ಪ್ರಾ. ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ

ದಾವಣಗೆರೆ, ಜ. 5- ಹಳೇಪೇಟೆಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ಆರ್.ಸಿ. ಅನುಸೂಯ ಮಾತನಾಡಿ, ಭಾರತ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರು ದೀನ-ದಲಿತರಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಸಾಮಾಜಿಕ ಜಾಗ್ರತೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ ಪಿಡುಗು ಗಳಾದ ಜಾತಿ ಪದ್ಧತಿ, ಬಾಲ್ಯವಿವಾಹ ಪದ್ಧತಿ, ಸತಿ ಸಹಗಮನ ಪದ್ದತಿಗಳ ವಿರುದ್ಧ ಜನರನ್ನು  ಜಾಗೃತಗೊಳಿಸುವ ಮೂಲಕ ಸಾಮಾಜಿಕ ಚಳವಳಿಗಳನ್ನು ರೂಪಿಸಿದರು ಎಂದು ತಿಳಿಸಿದರು.

ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಚಂದನ್ ಸಿ.ಆರ್., ಸಾವಿತ್ರಿ ಬಾಯಿ ಫುಲೆ ಶಿಕ್ಷಣ ಕ್ರಾಂತಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್.ಡಿ.ಎಂ.ಸಿ) ದಾವಣಗೆರೆ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ. ದಾಸರ್ ಮಾತನಾಡಿ, ಸಾವಿತ್ರಿ ಬಾಯಿ ಫುಲೆ ಅವರು ಶೋಷಣೆಗೆ ಒಳಗಾದ ದೀನದಲಿತರಿಗೆ, ಪುರುಷ ಮತ್ತು ಮಹಿಳೆಯರ, ಮಕ್ಕಳ ಕಲ್ಯಾಣಕ್ಕಾಗಿ, ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ರಾಂತಿ ಮೂಡಿಸಿದ ಮಹಾತಾಯಿ, ಶಿಕ್ಷಕಿ, ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರು ಸತಿ ಸಹಗಮನ ಪದ್ದತಿಯನ್ನು ವಿರೋಧ ಮಾಡಿದರು ಮತ್ತು ವಿಧವಾ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಮಾಜಿಕ ಜಾಗ್ರತೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಅವರ ಸಾಮಾಜಿಕ ಜಾಗ್ರತೆ, ಹೋರಾಟ ನಮಗೆ ಸ್ಪೂರ್ತಿ ನೀಡಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ನಮಿತಾ, ಸುಜಾತ, ಸಂಪತ್ ಕುಮಾರಿ, ಜಯಶ್ರೀ ಉಪಸ್ಥಿತರಿದ್ದರು.

ಸಮಾರಂಭದ  ಆರಂಭದಲ್ಲಿ  ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕೊನೆಯಲ್ಲಿ ಶಿಕ್ಷಕಿ ಸಂಪತ್ ಕುಮಾರಿ ವಂದಿಸಿದರು.

error: Content is protected !!