ಮಕ್ಕಳ ಆಸಕ್ತಿಗನುಗುಣವಾಗಿ ಶಿಕ್ಷಣ ನೀಡಬೇಕು : ಡಾ. ಪುಷ್ಪಲತಾ

ಮಕ್ಕಳ ಆಸಕ್ತಿಗನುಗುಣವಾಗಿ ಶಿಕ್ಷಣ ನೀಡಬೇಕು : ಡಾ. ಪುಷ್ಪಲತಾ

ದಾವಣಗೆರೆ, ಜ. 5 -ಮಕ್ಕಳಿಗೆ ಆಸಕ್ತಿಯಿರುವ ವಿಷಯದಲ್ಲಿಯೇ ಶಿಕ್ಷಣ ನೀಡಿದರೆ ಆ ವ್ಯಕ್ತಿ ಆ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಬಲ್ಲನು. ತಂದೆ-ತಾಯಿಯರು ತಮ್ಮ ಮಗು ವೈದ್ಯಕೀಯ ಅಥವಾ ಇಂಜಿನಿಯರ್ ಆಗಬೇಕೆಂದು ಇಚ್ಛೆಯಿಲ್ಲದ ಮಗುವನ್ನು ಒತ್ತಾಯ ಮಾಡಿ ಆ ಕೋರ್ಸ್ ಗೆ ಸೇರಿಸಿದರೆ ಮಗುವಿನ ಅಭಿವೃದ್ಧಿಗೆ ಬದಲು ಅವನತಿಯಾಗುವುದು ಎಂದು ದಕ್ಷಿಣ ವಲಯ  ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ ತಿಳಿಸಿದರು.

ಅವರು ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ನಡೆದ ಮಾಂಟೆಸೊರಿ ಕಾನ್ವೆಂಟ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ನುಡಿದರು. ಶಾಲೆಯ ಮಕ್ಕಳಿಂದ ನಡೆದ ನಿರೂಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಮತ್ತೋರ್ವ ಅತಿಥಿ ಶ್ರೀ ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಆರ್. ಜಿ.ಶ್ರೀನಿವಾಸಮೂರ್ತಿ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡುತ್ತಾ  ಇಂದು ಮಕ್ಕಳು ಶಿಕ್ಷಣ ಪಡೆದು  ಸ್ವಂತ ಉದ್ಯೋಗ ಮಾಡಿ  ಕ್ರಿಯಾಶೀಲ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ ಎ೦ದು ಪೋಷಕರಿಗೆ ಹಾಗೂ ಮಕ್ಕಳಿಗೆ ಕಿವಿಮಾತು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜರವರು ಶಾಲೆಯಲ್ಲಿ ದೊರಕುತ್ತಿರುವ ಪಠ್ಯ ಹಾಗೂ ಪಠ್ಯ ಪೂರಕ ಚಟುವಟಿಕೆಗಳನ್ನು ಶ್ಲ್ಯಾಘಿಸಿದರು,

ಸಮಾರಂಭದಲ್ಲಿ ಶಾಲೆಗೆ ಹತ್ತು ಡೆಸ್ಕ್‌ಗಳನ್ನು ದಾನ ಮಾಡಿದ ಶ್ರೀಮತಿ ಶ್ವೇತಾ ಹಾಗೂ   ಅಜಯ್ ಅವರನ್ನು ಗೌರವಿಸಲಾಯಿತು.  8 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕು. ಸೌಮ್ಯರನ್ನು ಸನ್ಮಾನಿಸಲಾಯಿತು.  ಕಾರ್ಯದರ್ಶಿ ಹೆಚ್.ಬಿ. ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಕೊನೆಯಲ್ಲಿ ಅಮಿತ್   ವಂದಿಸಿದರು.

error: Content is protected !!