ಹರಪನಹಳ್ಳಿ, ಜ.4- 18ನೇ ಶತಮಾನದಲ್ಲಿ ತಳಸಮುದಾಯಗಳಿಗೆ ಮತ್ತು ಎಲ್ಲ ಜಾತಿಯ ಹೆಣ್ಣು ಮಕ್ಕಳಿಗೆ ಶಾಲೆ ತೆರೆದು ಶಿಕ್ಷಣ ನೀಡಿದ ತಾಯಿ ಸಾವಿತ್ರಿ ಬಾಯಿ ಫುಲೆ ಎಂದು ಅಪರ ಸರ್ಕಾರಿ ವಕೀಲ ವಿ. ಜಿ. ಪ್ರಕಾಶ್ ಗೌಡ ಹೇಳಿದರು.
ತಾಲ್ಲೂಕಿನ ದೇವರ ತಿಮ್ಮಲಾಪುರ ಗ್ರಾಮದಲ್ಲಿ ಸ.ಹಿ.ಪ್ರಾಥಮಿಕ ಶಾಲೆ ಮತ್ತು ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಕಾನೂನು ಅರಿವು ಮತ್ತು ನೆರವು ಹಾಗೂ ತಾಯಿ ಸಾವಿತ್ರಿ ಬಾಯಿ ಫುಲೆರವರ 192 ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಂಚಿತ ಸಮುದಾಯಗಳಿಗೆ ಶಿಕ್ಷಣದ ಅರಿವು ಮತ್ತು ಕಾನೂನು ಜ್ಞಾನವನ್ನು ಹೋರಾಟದ ಮೂಲಕ ಕೊಟ್ಟವರು
ಹಾಗೂ ನಮಗಾಗಿ ಕಷ್ಟಗಳನ್ನು ಮೆಟ್ಟಿನಿಂತ ಸಮಾಜ ಸುಧಾರಕರ ವಿಚಾರಗಳನ್ನು ತಿಳಿಯುವುದಕ್ಕೆ ಶಿಕ್ಷಣ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಲತಾ ಟಿ. ಹೆಚ್. ಬಿಆರ್ಸಿ ಹೊನ್ನತ್ತೆಪ್ಪ, ಷಣ್ಮುಖಪ್ಪ, ಕಬೀರನಾಯ್ಕ, ವಾಗೀಶ್, ಎಂಐಜಿ ಕವಿತಾ, ಶೋಭಾ ಕುಮಾರಿ, ಶೋಭಾ ಹುಲ್ಮನಿ, ಮಲ್ಲಿಕಾರ್ಜುನ, ಸಾಜಿದಾ ಬಾನು, ರಜಿಯಾ, ಕೊಟ್ರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಎ. ಅಣ್ಣೇಶ್, ಗ್ರಾ. ಪಂ. ಸದಸ್ಯ ಜಿ. ರಮೇಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.