ಬೆಂಗಳೂರು, ಜ.5- ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರನ್ನು ಬೆಂಗಳೂರಿನ ರಾಜಭವನದಲ್ಲಿ ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ಭೇಟಿ ಮಾಡಿ ಸಮಾಲೋಚಿಸಿದರು.
ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಜಿಲ್ಲಾದ್ಯಂತ ಉಚಿತವಾಗಿ ಆಯೋಜಿಸುತ್ತಿರುವ ಆರೋಗ್ಯ ತಪಾಸಣೆ ಶಿಬಿರಗಳ ಬಗ್ಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಗಳೂರು ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಉದ್ಯಮಿಗಳಾದ ಅರವಿಂದ್ ಟಿ.ಜಿ, ವಿರಾಜ್ ಕೆ. ಅಣಜಿ, ಎನ್. ಪಿ. ವೀರೇಶ್ ದೇವರಬೆಳೆಕೆರೆ ಇದ್ದರು.