ಕರ್ನಾಟಕದ ಮಹೇಶ್ ಅಥಣಿಗೆ ಪ್ರಥಮ ಬಹುಮಾನ
ಹೊನ್ನಾಳಿ, ಜ.5- ಪಟ್ಟಣದ ದೊಡ್ಡಕೇರಿಯ ಶ್ರೀ ಬೀರಲಿಂಗೇಶ್ವರ ದೇವರ ಕಾರ್ತಿಕೋತ್ಸವದ ಅಂಗವಾಗಿ 3 ದಿನಗಳ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯ 3ನೇ ಮತ್ತು ಕೊನೆಯ ದಿನವಾದ ಇಂದು ಕುಸ್ತಿ ಪಂದ್ಯಾವಳಿಗೆ ತೆರೆ ಬಿದ್ದಿತು. ದಾವಣಗೆರೆ ಸೇರಿದಂತೆ, ನಾನಾ ರಾಜ್ಯಗಳಿಂದ ಬಂದಿದ್ದ ಸುಮಾರು 250ಕ್ಕೂ ಹೆಚ್ಚು ಕುಸ್ತಿ ಪಟುಗಳು ಎದುರಾಳಿಗೆ ಹಾಕಿದ ಬಿಗಿಪಟ್ಟುಗಳ ಮೂಲಕ ನೆರೆದಿದ್ದವರ ಮೈ ರೋಮಾಂಚನಗೊಳಿಸಿದರು.
ಕರ್ನಾಟಕದ ಮಹೇಶ್ ಅಥಣಿ ಪ್ರಥಮ ಬಹುಮಾನ ಪಡೆದರು. ಇವರು `ಕರ್ನಾಟಕ ಕೇಸರಿ’ ಪ್ರಶಸ್ತಿಗೆ ಭಾಜನರಾಗಿ 50,000 ನಗದು ಮತ್ತು 1 ಕೆ.ಜಿ. ಬೆಳ್ಳಿ ಬಹುಮಾನ ಪಡೆದರು. ದ್ವಿತೀಯ ಬಹುಮಾನವನ್ನು ಪಡೆದ ಮಹಾರಾಷ್ಟ್ರದ ಚಾಂಪಿಯನ್ ಲೋಕತ್ ಪವಾರ್ ಅವರಿಗೆ 25,000 ನಗದು ಮತ್ತು ಫ್ಯಾನ್ ಕೊಡುಗೆಯಾಗಿ ನೀಡಲಾಯಿತು. ಕುಸ್ತಿ ಪಂದ್ಯಾವಳಿಗೆ ದೇಣಿಗೆ ನೀಡಿದ ದಾನಿಗಳಿಗೆ, ಜನಪ್ರತಿನಿಧಿಗಳಿಗೆ ಗೌರವಿಸಲಾಯಿತು.
ವೇದಿಕೆಯ ಮೇಲೆ ದೇವರ ಗಣಮಕ್ಕಳಾದ ಅಣ್ಣಪ್ಪಸ್ವಾಮಿ, ಪ್ರಭುಸ್ವಾಮಿ, ಶಾಸಕ ಡಿ.ಜಿ.ಶಾಂತನಗೌಡ, ಕುಸ್ತಿ ಲೈಸೆನ್ಸ್ದಾರರಾದ ಎಚ್.ಬಿ. ಗಿಡ್ಡಪ್ಪ, ತೆಂಗಿನಮರದ ಮಾದಪ್ಪ, ಪರಸಣ್ಣರ ನರಸಿಂಹಪ್ಪ, ಗೌಡ್ರು ನರಸಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪುರಸಭೆ ಸದಸ್ಯ ಧರ್ಮಪ್ಪ, ಎಚ್.ಎ.ಉಮಾಪತಿ, ಕರವೇ ಅಧ್ಯಕ್ಷ ವಿನಯ್ ವಗ್ಗರ್, ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಮುಖಂಡ ಟಿ.ಜಿ. ರಮೇಶಗೌಡ, ಡಾ. ಜಗನ್ನಾಥ್ ಬಾಬು, ಮಾಜಿ ಸೈನಿಕ ಎಂ. ವಾಸಪ್ಪ, ಕುಸ್ತಿ ಕಮಿಟಿ ಅಧ್ಯಕ್ಷ ಎಚ್.ಬಿ. ಅಣ್ಣಪ್ಪ, ಗೌರವಾಧ್ಯಕ್ಷ ಎನ್.ಕೆ. ಆಂಜನೇಯ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ರವಿ ಗಾಳಿ, ಖಜಾಂಚಿ ಕಾಳಿಂಗಪ್ಪ, ಕತ್ತಿಗೆ ನಾಗರಾಜ್, ಎಚ್.ಡಿ. ವಿಜೇಂದ್ರಪ್ಪ, ಕಾಟ್ಯಾಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.