ಜಿಗಳಿ ಶಾಲೆಯಲ್ಲಿ ಕಲಿಕಾ ಆಂದೋಲನ

ಜಿಗಳಿ ಶಾಲೆಯಲ್ಲಿ ಕಲಿಕಾ ಆಂದೋಲನ

ಮಲೇಬೆನ್ನೂರು, ಜ.5- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾ.ಪಂ. ಮಟ್ಟದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್ ಉದ್ಘಾಟಿಸಿದರು.

ಆಂದೋಲನದ ನೋಡಲ್ ಅಧಿಕಾರಿ ಕೆ.ಬೀರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಇಲಾಖೆಯು 4, 5 ಮತ್ತು 6ನೇ ತರಗತಿ ಮಕ್ಕಳನ್ನು  ಹಿಂಜರಿಕೆ ಮನೋಭಾವದಿಂದ ಹೊರತರುವ ಉದ್ದೇಶದಿಂದ ಈ ಗಣಿತ ಕಲಿಕಾ ಆಂದೋಲನವನ್ನು ಗ್ರಾ.ಪಂ. ಮಟ್ಟದಲ್ಲಿ ಎಲ್ಲಾ ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ, 1 ಗಂಟೆ ಅವಧಿಯ ಮತ್ತು 20 ಅಂಕಗಳ ಪ್ರಶ್ನೆ ಪತ್ರಿಕೆ ಕೊಟ್ಟು ಪರೀಕ್ಷೆ ಬರೆಸಿ, ನಂತರ ಅಲ್ಲಿಯೇ ಮೌಲ್ಯಮಾಪನ ಮಾಡಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಗುವುದೆಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ ಮಾತನಾಡಿ, ಗಣಿತದ ಬಗ್ಗೆ ಮಕ್ಕಳಲ್ಲಿರುವ ಭಯ ಹೋಗಲಾಡಿಸಲು ಇದೊಂದು ಉತ್ತಮ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಬಿ.ಪ್ರಭಾಕರ್ ಅಧ್ಯಕ್ಷತೆ ವವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಣುಕಮ್ಮ ನಿಂಗಪ್ಪ, ಸದಸ್ಯರಾದ ಸುನೀತಾ ನಾಗರಾಜ್, ಮಂಜುಳಾ ನಾಗರಾಜ್, ಕವಿತಾ ಚೌಡಪ್ಪ, ಗಂಗಾಧರಚಾರಿ, ವಿಜಯ ಭಾಸ್ಕರ್, ಬಾಲಕೇಂದ್ರದ ಅಧ್ಯಕ್ಷ ಜಿ.ಆರ್.ಚಂದ್ರಪ್ಪ, ಜಿ.ಬೇವಿನಹಳ್ಳಿ ಎಸ್‌ಡಿಎಂಸಿ ಅಧ್ಯಕ್ಷ ಬಿ.ಕೆ.ನಿಂಗನಗೌಡ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಿ.ಪಿ.ಹನುಮಗೌಡ, ಪತ್ರಕರ್ತ ಪ್ರಕಾಶ್, ಸ್ವಯಂ ಸೇವಕರಾದ ಷಣ್ಮುಖಪ್ಪ, ಅರ್ಪಿತಾ, ಕಾವ್ಯ, ಲಕ್ಷ್ಮಿ, ಅನುಷಾ, ಸ್ನೇಹ, ಜಿ.ಬೇವಿನಹಳ್ಳಿ ಶಾಲೆಯ ಶಿಕ್ಷಕರಾದ ಪ್ರತಿಭಾ, ಹಾಲಮ್ಮ, ವಿಜಯಕುಮಾರ್, ಜಿಗಳಿ ಶಾಲೆಯ ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕರಾದ ಮಲ್ಲಿಕಾರ್ಜುನ್, ಲಿಂಗರಾಜ್, ಗುಡ್ಡಪ್ಪ, ಶ್ರೀನಿವಾಸ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

error: Content is protected !!