ಬಂಧಿತರ ಬಿಡುಗಡೆಗೆ ಆಗ್ರಹಿಸಿ ಕರವೇ ಉರುಳು ಸೇವೆ

ಬಂಧಿತರ ಬಿಡುಗಡೆಗೆ ಆಗ್ರಹಿಸಿ ಕರವೇ ಉರುಳು ಸೇವೆ

ದಾವಣಗೆರೆ, ಡಿ.29- ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ನಾರಾಯಣಗೌಡ ಅವ ರನ್ನು ಬಿಡುಗಡೆಗೊಳಿಸಬೇಕೆಂದು  ಆಗ್ರಹಿಸಿ ಪಾಲಿಕೆ ಮುಂಭಾಗದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೂ ಕರವೇ ಜಿಲ್ಲಾಧ್ಯಕ್ಷ ಎಂ. ಎಸ್.ರಾಮೇಗೌಡ, ಯುವ ಘಟಕದ ಅಧ್ಯಕ್ಷ ಗೋಪಾಲ್ ದೇವರಮನೆ,  ಜಿಲ್ಲಾ ಸಂಚಾಲಕ ಖಾದರ್ ಭಾಷಾ, ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಕುಮಾರ್, 13ನೇ ವಾರ್ಡಿನ ಅಧ್ಯಕ್ಷ ತನ್ವೀರ್,   ದಕ್ಷಿಣ ವಿಧಾನಸಭಾ ಉಪಾಧ್ಯಕ್ಷ ತಮನ್ನ ರಫೀಕ್ ಮತ್ತಿತರರು ಇಂದು  ಉರುಳಿ ಸೇವೆ ನಡೆಸಿದರು.  

ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಮತ್ತು 53 ಕಾರ್ಯಕರ್ತರನ್ನು ಬಂಧನ ಮಾಡುವ ಮೂಲಕ ರಾಜ್ಯ ಸರ್ಕಾರ ಕನ್ನಡ ನಾಡಿಗೆ ಮತ್ತು ಕನ್ನಡಿಗರಿಗೆ ದ್ರೋಹ ಎಸಗಿದೆ ಎಂದು  ರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.   

ನಾಮಫಲಕಗಳು ಶೇ. 60ರಷ್ಟು ಕನ್ನಡ ದಲ್ಲಿಯೇ   ಇರಬೇಕೆಂದು ಸರ್ಕಾರ ಆದೇಶ ಮಾಡಿದ್ದರೂ ಸಹ, ಸರಿಯಾದ ಕ್ರಮಕೈಗೊಳ್ಳದೇ ಇರುವುದರಿಂದ ಸರ್ಕಾರ ಮಾಡಬೇಕಾದ ಕೆಲಸವನ್ನು,  ಆಂಗ್ಲ ನಾಮ ಫಲಕಗಳಿಗೆ ಮಸಿ ಬಳಿ ಯುವ ಮತ್ತು ತೆರವುಗೊಳಿಸುವ ಕೆಲಸ ವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದೆ.  

ಕನ್ನಡಿಗರ  ಸರ್ಕಾರ ಕನ್ನಡದ ಪರವಾಗಿ ನಿಲುವುಗಳನ್ನು ಪ್ರಕಟಿಸುತ್ತೇವೆಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಕನ್ನಡ ಕಾರ್ಯಕರ್ತರ ಮೇಲೆ ಹಾಕಲಾಗಿರುವ ಕೇಸುಗಳನ್ನು ವಾಪಸ್‌ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.   

ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಕಾವಲು ಸಮಿತಿ ಸಂಪೂರ್ಣ ನಿಷ್ಕ್ರಿಯಗೊಂಡಿವೆ, ಕನ್ನಡದ ಪರವಾಗಿ ಒಂದು ಕೆಲಸ ಮಾಡುತ್ತಿಲ್ಲ ಇಂಥ ನಿಗಮಗಳನ್ನು ವಿಸರ್ಜಿಸಬೇಕು.  

ಮಹಾರಾಷ್ಟ್ರದಲ್ಲಿ   ಮರಾಠಿ ಭಾಷೆಗಾಗಿ ಹೋರಾಟ ಮಾಡುವ ಹೋರಾಟಗಾರರಿಗೆ ಸರ್ಕಾರವೇ ಅನುದಾನ ನೀಡಿ ಸಂಪೂರ್ಣ ಸಹಕಾರ ನೀಡುತ್ತದೆ. ಅದೇ ರೀತಿ ತಮಿಳುನಾಡಲ್ಲಿ ತಮಿಳು ಭಾಷೆಗೆ ಹೆಚ್ಚಿನ ಆದ್ಯತೆ ಇದೆ. ಆದರೆ ನಮ್ಮ ರಾಜ್ಯ ಸರ್ಕಾರ ಕನ್ನಡಪರ ಹೋರಾಟಗಾರರನ್ನು ಕೇಸುಗಳು ಹಾಕುವ ಮೂಲಕ ಜೈಲಿಗೆ ಕಳಿಸುವ `ಪ್ರಶಸ್ತಿ’ಯನ್ನು ನೀಡುವ ಕೆಲಸ ಮಾಡುತ್ತದೆ. ಇಂಥ ಕನ್ನಡ ದ್ರೋಹದ ಕೆಲಸ ಮತ್ತೊಂದಿಲ್ಲ ಎಂದು ಕರವೇ ತಿಳಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಂಜುಶ್ರೀ ಗೌಡ, ಜಿ.ಎಸ್ ಸಂತೋಷ್, ಕೆ.ಜಿ ಬಸವರಾಜ್,  ಮಲ್ಲಿಕಾರ್ಜುನ್, ಎಂ.ಡಿ ರಫೀಕ್, ನಾಗರಾಜ್  ಮೆಹರ್‌ವಾಡೆ,  ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಬಸಮ್ಮ,   ಮಂಜುಳಾ ಮಹಾಂತೇಶ್, ಸಾಕಮ್ಮ, ಮಂಜುಳಾ ಗಣೇಶ್, ಆಲೂರು ನಾಗಮ್ಮ,  ಶಶಿಕಲಾ, ಶ್ರೀಮತಿ ಮೆಹಬೂಬಾ, ಮಂಜುನಾಥ್, ಪರಮೇಶ್, ಸುರೇಶ್, ಮುಸ್ತಫಾ, ಅಕ್ಷಯ್, ಶ್ರೀನಿವಾಸ್, ದಾದಾಪೀರ್,  ಮೋಹನ್, ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು

error: Content is protected !!