ಹರಪನಹಳ್ಳಿ, ಡಿ. 29 – ಹ್ಯಾಂಡಲ್ ಇಲ್ಲದ ಬೈಕ್ ಸಾಹಸ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಕನ್ನಡ ಜಾಗ್ರತೆ ಜಾಥಾ ಹೊರಟ ಈರಣ್ಣ ಕುಂದರಿಮಠ್ ಹರಪನಹಳ್ಳಿಗೆ ಬಂದಾಗ ಅದ್ಧೂರಿಯಾಗಿ ಸ್ವಾಗತಿಸಿ ಆತಿಥ್ಯ ಮಾಡಿ ಬೀಳ್ಕೊಡಲಾಯಿತು.
ಕರ್ನಾಟಕಕ್ಕೆ 50 ರ ಸುವರ್ಣ ಸಂಭ್ರಮದ ಮಹೋತ್ಸವ ಹಾಗೂ 68 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರಗಿ ಜಿಲ್ಲಾಡಳಿತ ಭವನದಿಂದ ವಿಶೇಷ ಬೈಕ್ ಸಾಹಸ ಕ್ರೀಡೆಯನ್ನು ಹಮ್ಮಿಕೊಂಡು ಕನ್ನಡ ನಾಡು, ನುಡಿಗೆ ವಿಶಿಷ್ಟ ಜಾಗೃತಿ ಮೂಡಿಸಲು ಸುಮಾರು 860 ಕಿಮೀ ದೂರದ ಬೆಂಗಳೂರು ವರೆಗೆ ನಾಡು, ನುಡಿಗೆ ಜಾಗೃತಿಯನ್ನು ಮೂಡಿಸಲು ಹ್ಯಾಂಡಲ್ ಇಲ್ಲದ ಬೈಕ್ನ್ನು ಓಡಿಸುತ್ತ ಕಲಬುರಗಿಯಿಂದ ಜೇವರ್ಗಿ, ಶಹಾಪುರ, ಸುರಪುರ, ಲಿಂಗಸಗೂರ, ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಹೊನ್ನಳಿ, ಶಿವಮೊಗ್ಗ, ಭದ್ರಾವತಿ, ತರೀಕೆರೆ, ಕಡೂರ, ಅರಸೀಕೆರೆ, ತಿಪಟೂರು, ತುಮಕೂರು ಮಾರ್ಗವಾಗಿ ಬೆಂಗಳೂರು ವರೆಗೆ ವಿಧಾನ ಸೌಧದ ವರೆಗೆ ಸುಮಾರು 860 ಕಿಮೀ ಕ್ರಮಿಸಿ ಕನ್ನಡ ನಾಡು ನುಡಿಗೆ ಜಾಗೃತಿಯನ್ನು ಮೂಡಿಸುತ್ತ ಕೆಎ 29 ಹ್ಯಾಂಡಲ್ ಇಲ್ಲದ ಬೈಕ್ ಮೇಲೆ ಕನ್ನಡ ಧ್ವಜವನ್ನು ಹಿಡಿದುಕೊಂಡು ಸುತ್ತುತ್ತಾರೆ.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಎಸ್.ಯು.ಜೆ.ಎಂ. ಕಾಲೇಜು ಪ್ರಾಂಶುಪಾಲ ಎಚ್. ಮಲ್ಲಿಕಾರ್ಜುನ್, ಜೆ.ಸಿ.ಐ. ಅಧ್ಯಕ್ಷ ಪರಶುರಾಮ ಚಲವಾದಿ, ಕಾರ್ಯದರ್ಶಿ ಶರತ್ ಚಂದ್ರ, ಪ್ರಸನ್ನಕುಮಾರ ಜೈನ್, ಪಿ.ಟಿ. ನಾಗರಾಜ್, ಜೀವಜಲ ಟ್ರಸ್ಟ್ ಅಧ್ಯಕ್ಷ ಹೇಮಣ್ಣ ಮೊರಿಗೇರಿ, ಎಲ್ಐಸಿ ಪ್ರತಿನಿಧಿಗಳಾದ ಎಂ. ವೀರಭದ್ರಪ್ಪ, ಎ. ರೇವಣ್ಣ, ಕೊಟ್ಟೂರಿನ ಕೆ. ಶಿವರಾಜ್, ಹುಲಿಕಟ್ಟಿ ಮಂಜುನಾಥ, ಯರಬಳ್ಳಿ ಮಂಜುನಾಥ, ಕೊಂಗನ ಹೊಸೂರು ಎಂ. ಈಶ್ವರಪ್ಪ, ಅಲ್ಲದೇ ಶ್ರವಣ್ ಕುಮಾರ, ಶಶಿಕುಮಾರ್, ಶಾಂತ ಅಕ್ಕಿ , ನಿವೃತ್ತ ಶಿಕ್ಷಕ ಶಿವಾನಂದಪ್ಪ, ಜಾಲಗಾರ ಕೊಟ್ರೇಶ್, ನಿ.ಖಜಾನಿ ಅಧಿಕಾರಿ ಕೊಟ್ರಬಸಪ್ಪ ಮುಂತಾದವರು ಭಾಗವಹಿಸಿದ್ದರು.