ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲು ಮಕ್ಕಳೊಂದಿಗಿನ ಬಾಂಧವ್ಯ ಮುಖ್ಯ-ಚೇತನ ಒಲಂಪಿಯಾಡ್ ಶಾಲೆ- ಶಿಕ್ಷಣಾಧಿಕಾರಿ ಪುಷ್ಪಲತಾ

ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲು ಮಕ್ಕಳೊಂದಿಗಿನ ಬಾಂಧವ್ಯ ಮುಖ್ಯ-ಚೇತನ ಒಲಂಪಿಯಾಡ್ ಶಾಲೆ- ಶಿಕ್ಷಣಾಧಿಕಾರಿ ಪುಷ್ಪಲತಾ

ದಾವಣಗೆರೆ, ಡಿ. 29 – ನಗರದ  ಚೇತನ ಒಲಂಪಿಯಾಡ್ ಶಾಲೆಯಲ್ಲಿ  5ನೇ ಶಾಲಾ ವಾರ್ಷಿ ಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದಾವಣಗೆರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಲತಾ ಮಾತನಾಡಿ, ಮಕ್ಕಳಿಗಾಗಿ ಸಮಯವನ್ನು ನೀಡಬೇಕು ಎಂದು ಪೋಷಕರಿಗೆ ಕರೆ ನೀಡಿದರು.

ಮಕ್ಕಳು ತಮ್ಮ ಎಲ್ಲಾ ಸಂದರ್ಭಗಳನ್ನು ಮನೆಯಲ್ಲಿ ಹಂಚಿಕೊಳ್ಳಬೇಕು. ಭವಿಷ್ಯದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆ ಯಾಗಲು ಮಕ್ಕಳೊಂದಿಗಿನ ಬಾಂಧವ್ಯ ಮುಖ್ಯ.  ಮಕ್ಕಳೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು ಅರ್ಥೈಸಿಕೊಳ್ಳಬೇಕು. ಇತ್ತೀಚೆಗೆ ಮಕ್ಕಳ ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾರಣ ನಿರಾಶೆ. ಆ ಕಾರಣದಿಂದ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬ ಬೇಕು. ವಿಶ್ವಾಸದಿಂದ ಮಕ್ಕಳಲ್ಲಿ ಶಕ್ತಿ ತುಂಬಬೇಕು. ನಮ್ಮ ಭವಿಷ್ಯದ ಭಾರತಕ್ಕೆ  ಜಗತ್ತಿಗೆ ಭವ್ಯ ಪ್ರಜೆಗಳ ಅವಶ್ಯಕತೆ ಇದೆ. ಇದರಲ್ಲಿ ಶಿಕ್ಷಕರಷ್ಟೇ ಮಹತ್ತರ ಜವಾಬ್ದಾರಿ ಪೋಷಕರದ್ದು ಇದೆ. ಶ್ರೀಕೃಷ್ಣನಂತಹ ಸಾರಥ್ಯ ವಹಿಸುವಂತಹ ನಾಯಕರಾಗಬೇಕು. ತೇನ್ ಸಿಂಗ್ ನಂತಹ ಉತ್ಸಾಹಿ ಹಿಮಾಲಯ ಪರ್ವತರೋಹಿಯನ್ನು ಸೃಷ್ಟಿಸಿದಂತಹ ತಾಯಿಯ ರಾಗಬೇಕು. `ಜ್ಯೋತಿಯೇ ಆಗು ಜಗಕೆಲ್ಲ’ ಎಂಬ ವಿಶಾ ಲವಾದ ಮನೋಭಾವದಿಂದ  ಹರಸುವಂತಹ ತಾಯಂ ದಿರು ನಮ್ಮ ಕನ್ನಡ ನಾಡಿನವರು. ನಮ್ಮೊಳಗಿನ ಸಂಪತ್ತನ್ನು ನಮ್ಮ ಮಕ್ಕಳಿಗೆ ಕೊಟ್ಟಾಗ ಭವಿಷ್ಯದ ಸತ್ಪ್ರಜೆಗಳು ಖಂಡಿತಾ ನಿರ್ಮಾಣವಾಗುವರು ಎಂದು ತಿಳಿಸಿದರು. 

ಶಾಲಾ ನಿರ್ದೇಶಕ ರಾಘವೇಂದ್ರ ಪ್ರಸಾದ್, ವಿ.ವಿ.ಕಿರಣ್, ಪ್ರಾಂಶುಪಾಲರಾದ ವಿನೋದ್, ಸತ್ಯ ನಾರಾಯಣ ರೆಡ್ಡಿ, ಮುಖ್ಯೋಪಾಧ್ಯಾಯ ಬಿ.ಎಂ. ಬಸವರಾಜಯ್ಯ ಹಾಗೂ ವಿದ್ಯಾರ್ಥಿ ನಿಲಯದ ಮುಖ್ಯಸ್ಥ ರೇವಣಸಿದ್ದಪ್ಪ ಅವರು ಉಪಸ್ಥಿತರಿದ್ದರು. 

ಶಿಕ್ಷಕಿ ಶ್ರೀಮತಿ ತೇಜಶ್ಚಿನಿ ಸ್ವಾಗತಿಸಿದರು. ಶ್ರೀಮತಿ ಸ್ಮಿತಾ ನಿರೂಪಿಸಿದರು. ಶ್ರೀಮತಿ ಅಕ್ಷತಾ ಪಿ. ವಂದಿಸಿದರು.

error: Content is protected !!