ಯುವಕರಿಗೆ ಉತ್ತಮ ಸಮಾಜ ಕಟ್ಟಲು ಕರೆ

ಯುವಕರಿಗೆ ಉತ್ತಮ ಸಮಾಜ ಕಟ್ಟಲು ಕರೆ

ಹೊನ್ನಮರಡಿಯಲ್ಲಿನ ಸುವರ್ಣ ಕರ್ನಾಟಕ ವೇದಿಕೆಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್

ದಾವಣಗೆರೆ, ಡಿ. 28- ತಾಲ್ಲೂಕಿನ ಹೊನ್ನಮರಡಿ-ಆಂಜನೇಯ ನಗರದಲ್ಲಿ ಸುವರ್ಣ ಕರ್ನಾಟಕ ವೇದಿಕೆಯ ಗ್ರಾಮ ಘಟಕದ ವತಿಯಿಂದ 68 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ರೈತ ಮುಖಂಡ ತೇಜಸ್ವಿ ಪಟೇಲ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತ ಸಂಘಟನೆ, ದಲಿತ ಸಂಘಟನೆ, ಕಾರ್ಮಿಕ ಸಂಘಟನೆಗಳಲ್ಲಿ ವಯಸ್ಕರರು, ಮಧ್ಯ ವಯಸ್ಕರರು ಇದ್ದಾರೆ. ಆದರೆ ಕನ್ನಡ ಪರ ಸಂಘಟನೆಗಳಲ್ಲಿ ಅತಿ ಹೆಚ್ಚು ಯುವಕರೇ ಇರುವುದನ್ನು ಗಮನಿಸಬೇಕೆಂದರು.
ಯುವಕರು ಭವಿಷ್ಯದ ಪ್ರಜೆಗಳು, ನಮ್ಮ ದೇಶ, ಪ್ರಪಂಚದ ಇತಿಹಾಸ ಗಮನಿಸುತ್ತಾ ಬಂದರೆ ಹಲವು ಪ್ರಾಂತಗಳಲ್ಲಿ ಅದರಲ್ಲೂ ನಮ್ಮ ದೇಶದ ಸ್ವಾತಂತ್ರ್ಯದಲ್ಲಿ ಆ ಕಾಲದ ಯುವಕರು ಪ್ರಜ್ಞಾವಂತರಾಗಿದ್ದ ಕಾರಣ ಅವರು ಉತ್ತಮ ಸಮಾಜ ನಿರ್ಮಾಣ ಮಾಡಿದರು. ಅದೇ ರೀತಿ ಈಗಲೂ ಇನ್ನಷ್ಟು ಉತ್ತಮ ಸಮಾಜವನ್ನು ಕಟ್ಟಲು ಮನಸ್ಸು ಮಾಡಲು ಮುಂದಾಗುವಂತೆ ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಮಾತನಾಡಿದರು. ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ಉಪ ಪ್ರಾಚಾರ್ಯ ಪ್ರೊ ಎಂ. ಆರ್.ಹರೀಶ್, ಸಂತೋಷ್ ಕುಮಾರ್, ಮುರಿಗೆಪ್ಪ, ಎ.ಎಂ. ನಾಗರಾಜ್, ಪೋತಲ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

error: Content is protected !!