ಜನಪರ ಶಿಕ್ಷಣ ನೀತಿಗೆ ಆಗ್ರಹಿಸಿ ಕುಲಪತಿಗೆ ಸಮೀಕ್ಷಾ ವರದಿ ಸಲ್ಲಿಕೆ

ಜನಪರ ಶಿಕ್ಷಣ ನೀತಿಗೆ ಆಗ್ರಹಿಸಿ ಕುಲಪತಿಗೆ ಸಮೀಕ್ಷಾ ವರದಿ ಸಲ್ಲಿಕೆ

ಜನಪರ ಶಿಕ್ಷಣ ನೀತಿಗೆ ಆಗ್ರಹಿಸಿ ಕುಲಪತಿಗೆ ಸಮೀಕ್ಷಾ ವರದಿ ಸಲ್ಲಿಕೆ ದಾವಣಗೆರೆ, ಡಿ. 28- ಕರ್ನಾಟಕದಲ್ಲಿ ಜನಪರ ಶಿಕ್ಷಣ ನೀತಿಗೆ ಆಗ್ರಹಿಸಿ ನಡೆಸಿದ ಸಮೀಕ್ಷಾ ವರದಿಯನ್ನು ಎಐಡಿಎಸ್‌ಓ ಸಂಘಟನೆ ನೇತೃತ್ವದಲ್ಲಿ ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ್ ಅವರಿಗೆ ಸಲ್ಲಿಸಲಾಯಿತು.
ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬೇಳೂರು, ದಾವಣಗೆರೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ಅವರು ಈ ವರದಿಯನ್ನು ಸಲ್ಲಿಸಿದರು.
ಕರ್ನಾಟಕದ 9 ಸರ್ಕಾರಿ ವಿಶ್ವವಿದ್ಯಾಲಯಗಳು, 82 ಸರ್ಕಾರಿ ಪದವಿ ಕಾಲೇಜುಗಳು, 12 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು 15 ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳು ಸೇರಿದಂತೆ 23,120 ಜನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಶಿಕ್ಷಣ ನೀತಿಯ ಮೇಲೆ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಸಮೀಕ್ಷೆ ಇದಾಗಿದೆ.
ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕೆಂಬುದು ಕರ್ನಾಟಕದ ಜನತೆಯ ಆಗ್ರಹವಾಗಿದೆ. ನಾಲ್ಕು ವರ್ಷಗಳ ಪದವಿಯನ್ನು ಕೈಬಿಡಬೇಕೆಂಬದು ಸಂಘಟನೆಯ ಆಶಯವಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕೆಂದು ವಿದ್ಯಾರ್ಥಿಗಳು ಬಯಸಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬೇಳೂರು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಲು ಪ್ರಬಲ ಚಳವಳಿಯನ್ನು ಬೆಳೆಸುವ ಮತ್ತು ಎನ್‌ಇಪಿ 2020 ನ್ನು ಪ್ರತಿರೋಧಿಸಲು ಮುನ್ನಡೆಯಬೇಕಾಗಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ, ಉದ್ಯೋಗ ತರಬೇತಿ ನೀಡುವ ನೆಪದಲ್ಲಿ ಪಠ್ಯಕ್ರಮದಲ್ಲಿ ಮೌಲ್ಯಗಳನ್ನು ಕಡೆಗಣಿಸಬಾರದು ಎಂದು ಹೇಳಿದರು.
ರಾಜ್ಯದಲ್ಲಿ ಜನಪರ ಶಿಕ್ಷಣ ನೀತಿ ಜಾರಿಯಾಗಬೇಕೆಂದು ಸಂಘಟನೆ ಮುಖಂಡರು ಒತ್ತಾಯಿಸಿದರು.

error: Content is protected !!