ದಾವಣಗೆರೆ, ಡಿ. 28- ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಆರ್.ಎಸ್.ಎಸ್. ಮುಖಂಡ ಕಲ್ಕಡ್ಕರ್ ಪ್ರಭಾಕರ್ ಭಟ್ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಘಟನೆಯಲ್ಲಿ ಕಲ್ಕಡ್ಕರ್ ಪ್ರಭಾಕರ್ ಭಟ್ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ರೀತಿ ಧರ್ಮಗಳ ಅವಹೇಳನ ಕೃತ್ಯ ಹಲವು ಬಾರಿ ನಡೆದಿದ್ದು, ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರದ ಉಪ ವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಆರಿಫ್ ಖಾನ್, ರಾಜ್ಯ ಕಾರ್ಯದರ್ಶಿ ಮಹಮ್ಮದ್ ಸಿರಾಜ್, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಎ., ತಾಹೀರ್ ಘನಿ, ಎಸ್.ಕೆ. ಜಬಿವುಲ್ಲಾ, ಕೊಡಪಾನ ದಾದಾಪೀರ್, ಮೈನುದ್ದೀನ್, ಅನಿಸ್ ಪಾಷ, ಹನೀಫ್, ಹರೀಶ್, ಮುಷ್ತಾಕ್, ಜಾನ್ ಇತರರು ಇದ್ದರು.
ಕಲ್ಕಡ್ಕರ್ ಪ್ರಭಾಕರ್ ಭಟ್ ಮೇಲೆ ಕ್ರಮಕ್ಕೆ ಆಗ್ರಹ : ಪ್ರತಿಭಟನೆ
