ಯಾಂತ್ರೀಕೃತ ಕೃಷಿ ಪದ್ಧತಿ ಅಳವಡಿಕೆ ಅನಿವಾರ್ಯ

ಯಾಂತ್ರೀಕೃತ ಕೃಷಿ ಪದ್ಧತಿ ಅಳವಡಿಕೆ ಅನಿವಾರ್ಯ

ಹರಪನಹಳ್ಳಿಯ ಕಾರ್ಯಕ್ರಮದಲ್ಲಿ ಶಾಸಕರಾದ ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ, ಡಿ. 25 – ಕೃಷಿ ಕಾರ್ಮಿಕರ  ಕೊರತೆಯಿಂದ  ರೈತರು ಯಾತ್ರೀಕೃತ ಕೃಷಿ ಪದ್ದತಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ  ಕೊಟ್ಟೂರು  ರಸ್ತೆಯ  ಇಂಡಿಯನ್ ಪೆಟ್ರೋಲಿಯಂ ಬಂಕ್ ಬಳಿ  ಇಂಡಿಯನ್ ಮೋಟಾರ್‌ ವತಿಯಿಂದ  ಶಕ್ತಿ ಮಾನ್ ಕೃಷಿ ಪರಿಕರಗಳ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಕೂಲಿ ಆಳುಗಳ ಸಮಸ್ಯೆ ನೀಗಿಸಲು ಯಂತ್ರದ ಮೊರೆ ಹೋಗಿದ್ದಾರೆ. ಕೆಸರು ಗದ್ದೆ ಮಾಡಿಕೊಳ್ಳುವುದರಿಂದ ಹಿಡಿದು ಕೊಯ್ಲು ಮಾಡಿ   ಮೆಕ್ಕೆ ಜೋಳ, ರಾಗಿ, ಜೋಳ ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಮನೆಗೆ ತರುವವರೆಗೆ ಪ್ರತಿಯೊಂದು ಕೆಲಸಕ್ಕೂ ಕೂಲಿ ಕಾರ್ಮಿಕರು ಬೇಕೇ ಬೇಕು. ಆದರೆ ಸಮಯಕ್ಕೆ ಸರಿಯಾಗಿ ಸಿಗೋದಿಲ್ಲ. ಹೀಗಾಗಿ ರೈತರು ಈ ಯಾಂತ್ರೀಕೃತ ಪದ್ಧತಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ರೈತರು ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಕೆಯಿಂದ ಖರ್ಚು ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿದ್ದು, ಅಧುನಿಕ ಕೃಷಿ ಬಳಕೆ ಹಾಗೂ ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬೇಕು ಎಂದರು.

ಪುರಸಭೆ ಸದಸ್ಯ ಡಿ.ಅಬ್ದುಲ್ ರಹಿಮಾನ್ ಸಾಹೇಬ್ ಮಾತನಾಡಿ, ಇತ್ತಿಚಿಗೆ ರೈತರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳು ಪರೋಕ್ಷವಾಗಿ ಮತ್ತು ನೇರವಾಗಿ ರೈತನ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇದಲ್ಲದೆ, ಕೃಷಿ ಪದ್ಧತಿಗಳು ಮತ್ತು ಕೃಷಿಯ ಇತರೆ ಅಂಶಗಳು ಸಂಪನ್ಮೂಲಗಳು ಮತ್ತು ಸಮಯವನ್ನು ತೆಗೆದುಕೊಳ್ಳಬಹುದು. ಉಳುವುದು, ನೆಲ ಹದಮಾಡುವುದು, ಬಿತ್ತನೆ, ಕಳೆಕಿತ್ತು ಏರು ಕಟ್ಟುವುದು, ಕುಯಿಲು, ಒಕ್ಕಣೆ ಮಾಡುವುದು ಇವು ವಿವಿಧ ಹಂತಗಳ ಕೃಷಿ ಕೆಲಸಗಳಾಗಿವೆ ಎಂದರು. 

ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್ ಮಾತನಾಡಿ, ಆಧುನಿಕ ಕೃಷಿ ಪದ್ಧತಿ ಗಳಲ್ಲಿ ಕೃಷಿ ಉಪಕರಣಗಳು ಪ್ರಮುಖ ಪಾತ್ರವಹಿ ಸುತ್ತವೆ. ಅವುಗಳನ್ನು ವಾಣಿಜ್ಯ ಕೃಷಿ ಪದ್ಧತಿಗಳಲ್ಲಿ ಬಳಸಲು ಸಲಹೆ ನೀಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಕ್ತಿಮಾನ್ ಸರ್ವಿಸ್ ಮ್ಯಾನೇಜರ್ ಸುಭಾನ್‌, ಸಂದೀಪ್, ಶ್ರೀಕಾಂತ,   ಮುಖಂಡರಾದ ಶೇಕ್‌ಷಾವಲಿ, ಶಕ್ತಿಮಾನ್ ಕೃಷಿ ಪರಿಕರಗಳ ಮಳಿಗೆ ಮಾಲೀಕ ವಾಹೀದ್ ಸಾಬ್, ಮುಖಂಡರಾದ ಶೇಕ್‌ಷಾವಲಿ, ವಾಹೀದ್ ಸೇರಿದಂತೆ ಇತರರು ಇದ್ದರು.

error: Content is protected !!