ದಾವಣಗೆೆರೆ, ಡಿ.25- ಲೋಕೋಪಯೋಗಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಕಬ್ಬಿಣದ ಬ್ಯಾರಿಕೇಡ್ ಡಿವೈಡರ್‌ಗಳನ್ನು ಅಳವಡಿಸಲಾಗಿತ್ತು.
ಈ ಡಿವೈಡರ್‌ಗಳ ಪೈಕಿ ಕೆಲವು ಇದ್ದರೆ ಮತ್ತೆ ಕೆಲವು ಕಿತ್ತು ಹೋಗಿವೆ. ಆದರೆ, ಅವುಗಳನ್ನು ಅಳವಡಿಸಲು ಹಾಕಲಾಗಿದ್ದ ಮೊಳೆಗಳು ರಸ್ತೆಯಲ್ಲಿಯೇ ಇರುವುದರಿಂದ ವಾಹನದ ಟಯರ್ ಗಳಿಗೆ ಹಾನಿಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ದೂರಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿರುವ ಅವರು, ಈ ಮೊಳೆಗಳನ್ನು ತೆಗೆಯಲು ತಾವು ಸಿದ್ಧರಿದ್ದು, ಅನುಮತಿ ನೀಡಬೇಕೆಂದೂ ತಿಳಿಸಿದ್ದಾರೆ.