ರಿಫ್ಲೆಕ್ಟಿವ್‌ ಟೇಪ್‌, ಕ್ಯೂ ಆರ್. ಕೋಡ್ ವಿರುದ್ಧ ಲಾರಿ ಮಾಲೀಕರ, ಏಜೆಂಟರ ಪ್ರತಿಭಟನೆ

ರಿಫ್ಲೆಕ್ಟಿವ್‌ ಟೇಪ್‌, ಕ್ಯೂ ಆರ್. ಕೋಡ್ ವಿರುದ್ಧ ಲಾರಿ ಮಾಲೀಕರ, ಏಜೆಂಟರ ಪ್ರತಿಭಟನೆ

ದಾವಣಗೆರೆ, ಡಿ.24- ಸರಕು ಸರಬರಾಜು ವಾಹನಗಳಿಗೆ ರಿಫ್ಲೆಕ್ಟಿವ್‌ ಟೇಪ್‌ ಜೊತೆಗೆ ಕ್ಯೂಆರ್‌ ಕೋಡ್‌, ಎಚ್‌ಎಸ್‌ಆರ್‌ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ ಕಡ್ಡಾಯಗೊಳಿಸಿ ರುವುದನ್ನು ಖಂಡಿಸಿ, ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್‌ ಏಜೆಂಟರ ಸಂಘ ನಗರದಲ್ಲಿ  ನಿನ್ನೆ ಪ್ರತಿಭಟನೆ ನಡೆಸಲಾಯಿತು.

ಪ್ರಾದೇಶಕ ಸಾರಿಗೆ ಇಲಾಖೆ ಆವರಣದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ನೀತಿ ವಿರುದ್ಧ ಸಂಘದ ಜಿಲ್ಲಾ ಅಧ್ಯಕ್ಷ ಸೈಯದ್‌ ಸೈಫುಲ್ಲಾ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನಂತರ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್‌ರ ಮುಖಾಂತರ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಅರ್ಪಿಸಲಾಯಿತು. 

ಇದೇ ವೇಳೆ ಮಾತನಾಡಿದ ಸೈಯದ್‌ ಸೈಫುಲ್ಲಾ, ಕೇಂದ್ರ, ರಾಜ್ಯ ಸರ್ಕಾರಗಳ ಇಂತಹ ನೀತಿ, ನಿಯಮಗಳಿಂದ ವಾಹನ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿದ್ದು, ಇದ್ಯಾವುದರ ಪರಿವೆ ಇಲ್ಲದಂತೆ ಉಭಯ ಸರ್ಕಾರಗಳು ವಾಹನ ಮಾಲೀಕರಿಗೆ ಇಲ್ಲಸಲ್ಲದ ನಿಯಮಗಳನ್ನು ಹೇರುತ್ತಾ ಸಾಗುತ್ತಿವೆ. ರಿಫ್ಲೆಕ್ಟಿವ್‌ ಟೇಪ್‌ ಕ್ಯೂಆರ್‌ ಕೋಡ್‌, ಎಚ್‌ಎಸ್‌ಆರ್‌ಪಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ ಕಡ್ಡಾಯದಂತಹ ನಿಯಮಗಳು ವಾಹನ ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತಿವೆ ಎಂದರು.

ವಾಹನ ಮಾಲೀಕರಿಗೆ ಹೆಚ್ಚುವರಿ ಖರ್ಚಿಗೆ ಅವಕಾಶ ನೀಡುವ ಕೆಲಸ ಇದಾಗಿದೆ. ರಿಫ್ಲೆಕ್ಟಿವ್‌ ಟೇಪ್ ಮಾರುಕಟ್ಟೆಯಲ್ಲಿ 53 ರೂ.ಗೆ ಲಭ್ಯವಿದ್ದು, ಅದನ್ನು ಕ್ಯೂಆರ್‌ ಕೋಡ್‌ ಎಂಬುದಾಗಿ

ಯಾವುದೇ ರೀತಿಯ ಕೇಂದ್ರ, ರಾಜ್ಯ ಸರ್ಕಾರಗಳ ಮೋಟಾರು ವಾಹನಗಳ ಕಾಯ್ದೆಯಲ್ಲಿ ನಿಯಮ ಇಲ್ಲದಿದ್ದರೂ, ಇಂತಹ ಆದೇಶ ಹೊರಡಿಸಲಾಿಗೆ. ಕೇವಲ 53 ರೂ.ಗೆ ಸಿಗುವ ರಿಫ್ಲೆಕ್ಟರ್‌ ಟೇಪನ್ನು ಸಾರಿಗೆ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಿ, 130 ರೂ.ಗೆ 1 ಮೀಟರ್‌ನಂತೆ ಕೆಲವು ಮಾರಾಟಗಾರರಿಗೆ ಸರ್ಕಾರದಿಂದ ಅಧಿಕೃತ ಮಾರಾಟಗಾರರೆಂದು ನೇಮಿಸಿ, ಜನರ ಸುಲಿಗೆ ಮಾಡುವ ದಂಧೆ ಶುರುವಾಗಿದೆ ಎಂದು ಅವರು ಆರೋಪಿಸಿದರು.

ಸರ್ಕಾರಗಳು ಸಹ ಇಂತಹ ನಿಯಮ ಮಾಡುವ ಮುನ್ನ ವಾಹನಗಳ ಮಾಲೀಕರ ಆರ್ಥಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು, ಮುಂದುವರಿಯಬೇಕು. ಲಾರಿ ಮಾಲೀಕರು, ಚಾಲಕರು ಯಾವುದೇ ನೈಸರ್ಗಿಕ ವಿಕೋಪಗಳಿಗೆ ಹೆದರದೆ ಕೊರೊನಾ ವೇಳೆ ತಮ್ಮ ಜೀವದ ಹಂಗನ್ನು ತೊರೆದು, ಅಗತ್ಯ ವಸ್ತು ಸಾಗಾಣಿಕೆಯಲ್ಲಿ  ವ್ಯತ್ಯಾಸವಾದೇ ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಲಾರಿ ಚಾಲಕರಿೆ ಪ್ರತಿ 100 ಕಿ.ಮೀ.ಗೆ ಒಂದರಂತೆ ತಂಗುದಾಣ ನಿರ್ಮಿಸಬೇಕು. ನಮ್ಮ ಬೇಡಿಕೆ ಕುರಿತಂತೆ ಸಾರಿಗೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದ್ದು, ಇಲಾಖೆ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟ ನಮಗೂ ಅನಿವಾರ್ಯವಾಗಿದೆ ಎಂದು ಸೈಫುಲ್ಲಾ ಹೇಳಿದರು. 

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್. ಮಲ್ಲೇಶಪ್ಪ, ಸಂಘದ ಭೀಮಣ್ಣ, ಎಸ್‌.ಕೆ. ಮಲ್ಲಿಕಾರ್ಜುನ, ಮಹಾಂತೇಶ ವಿ. ಒಣರೊಟ್ಟಿ, ವಿಜಯಕುಮಾರ, ಸೋಗಿ ಮುರುಗೇಶ, ಲಾರಿ ಮಾಲೀಕರು, ಟ್ರಾನ್ಸ್‌ಪೋರ್ಟ್‌ ಏಜೆಂಟರು, ಚಾಲಕರು, ನಿರ್ವಾಹಕರು, ಇತರರು ಇದ್ದರು.

error: Content is protected !!