ಎಸ್ಎಆರ್ ನಿವಾಸಕ್ಕೆ ವಿಜಯೇಂದ್ರ

ಎಸ್ಎಆರ್ ನಿವಾಸಕ್ಕೆ ವಿಜಯೇಂದ್ರ

ದಾವಣಗೆರೆ, ಡಿ.24- ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಇಂದು ನಗರಕ್ಕಾಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶಿರಮಗೊಂಡನಹಳ್ಳಿಯ ಎಸ್.ಎ. ರವೀಂದ್ರನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ, ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ವೀಣಾ ನಂಜಣ್ಣ, ಎ.ಬಿ. ಕರಿಬಸಪ್ಪ, ಬೇತೂರು ಸಂಗಪ್ಪ, ಎಸ್.ಆರ್.ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!