ಸಾಲಕಟ್ಟೆ : ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಇಂಗಿತ
ಮಲೇಬೆನ್ನೂರು, ಡಿ.24- ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ಕೆಲಸವನ್ನು ಮಹಿಳೆಯರು ಮಾಡಬೇಕು. ಆ ಮೂಲಕ ದೇಶದ ಪ್ರಗತಿಗೆ ಕೈ ಜೋಡಿಸಬೇಕೆಂದು ಶಾಸಕ ಬಿ.ಪಿ.ಹರೀಶ್ ಮಹಿಳೆಯರಲ್ಲಿ ಮನವಿ ಮಾಡಿದರು.
ಅವರು, ಭಾನುವಾರ ಸಾಲಕಟ್ಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆ.ಬೇವಿನಹಳ್ಳಿ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘ ಗಳ ಒಕ್ಕೂಟಗಳು ಮತ್ತು ಪೂಜಾ ವ್ಯವಸ್ಥಾಪನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವು ದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಅದಕ್ಕಾಗಿಯೇ ಡಾ. ವೀರೇಂದ್ರ ಹೆಗ್ಗಡೆ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ. ಜೊತೆಗೆ ಅವರಿಗೆ ಬ್ಯಾಂಕ್ ವ್ಯವಹಾರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಪ್ರಸ್ತುತ ರಾಜ್ಯದ ಪ್ರತಿ ಹಳ್ಳಿಯಲ್ಲೂ ಶೇ.90 ರಷ್ಟು ಮಹಿಳೆಯರು ಬ್ಯಾಂಕ್ ವ್ಯವಹಾರದ ಜ್ಞಾನ ಹೊಂದಿದ್ದಾರೆ ಎಂದು ಹರೀಶ್ ಹೇಳಿದರು.
ಧಾರ್ಮಿಕ ಉಪನ್ಯಾಸ ನೀಡಿದ ದಾವಣಗೆರೆ ವ್ಯಂಗ್ಯ ಚಿತ್ರಕಾರ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್.ಬಿ.ಮಂಜುನಾಥ್ ಅವರು, ದೇಶದ ಆರ್ಥಿಕ ಶಕ್ತಿ ಬೆಳೆದಿರುವುದು ಹಳ್ಳಿಗಳಿಂದಲೇ ಹೊರೆತು ನಗರಗಳಿಂದಲ್ಲ. ಕೃಷಿ ಇದ್ದರೆ ಮಾತ್ರ ಕೈಗಾರಿಕೆಗಳ ನಡೆಯುತ್ತೇವೆ. ಭಾರತ ದೇಶ 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿ ಹೊಂದುವ ಗುರಿ ಹೊಂದಿದ್ದು, ಈಗ 3.5 ಟ್ರಿಲಿಯನ್ ಆರ್ಥಿಕ ಶಕ್ತಿ ಪಡೆದಿದೆ. ದೇಶಕ್ಕೆ ಅನ್ನ ಕೊಡುವವರು ರೈತರೇ ಹೊರೆತು ಕೈಗಾರಿಕೆಗಳು, ಶ್ರೀಮಂತರಲ್ಲ. ಈ ಹಿನ್ನೆಲೆ ಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರು, ದೇಶದಲ್ಲಿರುವ 6 ಲಕ್ಷದ 46 ಸಾವಿರ ಹಳ್ಳಿಗಳ ಉದ್ಘಾರ ಆಗದ ಹೊರೆತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಂದೇ ಹೇಳಿದ್ದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಸಾಲಕಟ್ಟೆ ಗ್ರಾಮದ ಹಿರಿಯ ಮುಖಂಡ ಡಿ.ಎಂ.ಹಾಲಸ್ವಾಮಿ, ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋನಾಧಿಕಾರಿ ವಸಂತ್ ದೇವಾಡಿಗ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜ್ಯೋತಿ ನಾಗರಾಜ್, ಪ್ರಗತಿಪರ ಕೃಷಿಕ ಡಾ. ವೆಂಕಟ ರಾಮಾಂಜನೇಯ ಮಾತನಾಡಿದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಎಂ.ಜಿ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಜಿ.ಮಂಜುನಾಥ್ ಪಟೇಲ್, ಗ್ರಾಮದ ವಿ.ರಾಜಣ್ಣ, ಕೆ.ಯೋಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ವರಯ್ಯ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಪೂಜಾ ಸಮಿತಿಯ ಕೆ.ಎಂ.ನಿಜಗುಣ, ಕೆ.ಎನ್.ದೇವೇಂದ್ರಪ್ಪ, ಶ್ರೀಮತಿ ವನಜಾಕ್ಷಿ, ಶಾಂತಮ್ಮ, ಸುನಂದಮ್ಮ, ಎಂ.ಎಂ.ಪಾಟೀಲ್, ಪಿ.ಶಿವಪ್ಪ, ಎ.ವಿಜಯಕುಮಾರ್, ಎ.ಶಂಭುಲಿಂಗಪ್ಪ, ಬಿ.ಉಮೇಶ್ ಆಚಾರ್ಯ, ನೇತ್ರಾ, ಎಸ್.ಜಿ. ಮಂಜುನಾಥ್, ಸುಮಂಗಲ, ಕೆ.ಬೇವಿನ ಹಳ್ಳಿಯ ವಲಯ ಮೇಲ್ವಿಚಾರಕ ಮಾರುತಿ ಗೌಡ, ಜಿಗಳಿಯ ವಲಯ ಮೇಲ್ವೆಚಾರಕ ಹರೀಶ್ ಮತ್ತಿತರರು ಭಾಗವಹಿಸಿದ್ದರು.