ದಾವಣಗೆರೆ, ಡಿ.24- ದೊಡ್ಡಬಾತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಗುಂಪಿಗೆ ಭರ್ಜರಿ ಜಯ ಲಭಿಸಿದೆ ಎಂದು ಬಿಜೆಪಿ ಮುಖಂಡ ಡಿ.ಆರ್.ವಿರೇಶ್ ತಿಳಿಸಿದ್ದಾರೆ.
12 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. 12 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಎಸ್ಟಿ ಕ್ಷೇತ್ರದಿಂದ ಕೃಷ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಎ.ಮುನಿಯಪ್ಪ, ವಸಂತಪ್ಪ, ಪಿ.ವೀರೇಶ್, ಸಿದ್ದಲಿಂಗಪ್ಪ, ಚಂದ್ರಪ್ಪ ಪೂಜಾರ್, ಶ್ರೀಮತಿ ಸರಿತಾ ಮಹೇಶಪ್ಪ, ಶ್ರೀಮತಿ ಶಶಿಕಲಾ ರೇವಣಸಿದ್ದಪ್ಪ, ಉಪ್ಪಾರ್ ಶಿವಕುಮಾರ್, ಹೆಚ್.ಕೆ.ಚಂದ್ರಪ್ಪ, ಎ.ಕೆ.ಗಂಗಾಧರ್, ಶಂಕರ್ ಅವರುಗಳು ಗೆಲುವು ಸಾಧಿಸಿದ್ದಾರೆ. ಚುನಾವಣಾಧಿಕಾರಿ ಜಗದೀಶ್ ಕಾರ್ಯನಿರ್ವಹಿಸಿದರು.