ಶಾಸಕ ಶಾಂತನಗೌಡರ 75ನೇ ವರ್ಷದ ಹುಟ್ಟು ಹಬ್ಬ ಅರ್ಥಪೂರ್ಣ ಆಚರಣೆಗೆ ತೀರ್ಮಾನ

ಶಾಸಕ ಶಾಂತನಗೌಡರ 75ನೇ ವರ್ಷದ ಹುಟ್ಟು ಹಬ್ಬ ಅರ್ಥಪೂರ್ಣ ಆಚರಣೆಗೆ ತೀರ್ಮಾನ

ಹೊನ್ನಾಳಿ, ಡಿ.24- ಹಿರಿಯ ಶಾಸಕ ಡಿ.ಜಿ.ಶಾಂತನಗೌಡ ಅವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜನವರಿ ತಿಂಗಳಲ್ಲಿ ಶಾಂತನಗೌಡರ ಅಭಿಮಾನಿ ಬಳಗದ ವತಿಯಿಂದ ವಿಜೃಂಭಣೆ ಮತ್ತು ಅರ್ಥ ಪೂರ್ಣವಾಗಿ ಆಚರಿಸಲು ತೀರ್ಮಾನಿಸಿದ್ದು, ಇದರ ಪೂರ್ವಭಾವಿ ಸಭೆಯನ್ನು ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶಾಂತನಗೌಡರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವಕ್ಕೆ ಎಲ್ಲಾ ಸಮಾಜದ ಸ್ವಾಮೀಜಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ   ಗಣ್ಯರನ್ನು ಕರೆಯಲು ತೀರ್ಮಾನಿಸಲಾಗಿದೆ.

ಅಮೃತ ಮಹೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲು ಹುಟ್ಟು ಹಬ್ಬದ ಸಮಿತಿಯನ್ನು ಶೀಘ್ರವೇ ರಚನೆ ಮಾಡಲಾ ಗುವುದು. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳ ನಿಗದಿ ಕುರಿತಂತೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. 

ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರ, ಶಾಸಕರ ಕುರಿತಾದ ಕಿರುಚಿತ್ರ ಪ್ರದರ್ಶನ, ಕ್ರೀಡಾಕೂಟ, ಸಂಗೀತ ದಿಗ್ಗಜರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಡಾ.ಈಶ್ವರ್ ನಾಯ್ಕ್, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ಹನು ಮನಹಳ್ಳಿ ಬಸವರಾಜಪ್ಪ, ಶಿವಪ್ಪ ನ್ಯಾಮತಿ, ಎಚ್.ಎ.ಗದ್ದಿಗೇಶ್, ಎಚ್.ಎ. ಉಮಾಪತಿ, ಡಿ.ಜಿ.ವಿಶ್ವನಾಥ್, ನುಚ್ಚಿನ ವಾಗೀಶ್, ಚೀಲೂರು ವಾಜಿದ್, ಆರ್.ನಾಗಪ್ಪ, ಸಣ್ಣಕ್ಕಿ ಬಸವನಗೌಡ, ಪುಷ್ಪಲತಾ ರವೀಶ್, ವನಜಾಕ್ಷಮ್ಮ, ಬೆನಕನಹಳ್ಳಿ ವೀರಣ್ಣ, ದಿಡಗೂರು ಎ.ಜಿ.ಪ್ರಕಾಶ್, ಅರಬಗಟ್ಟೆ ರಮೇಶ್, ಕುಳಗಟ್ಟೆ ಎಂ.ಆರ್.ಹನುಮಂ ತಪ್ಪ, ಸುಲೆಮಾನ್ ಖಾನ್, ತಕ್ಕನಹಳ್ಳಿ ಸುರೇಶ್, ಮಾಸಡಿ ಗಜೇಂದ್ರಪ್ಪ, ಅರಕೆರೆ ಮಧುಗೌಡ, ದಿಡಗೂರು ರುದ್ರೇಶ್, ಬಿದರಗಡ್ಡೆ ನಾಗರಾಜ್, ಡಿ.ಸುರೇಶ್, ಜಗ ದೀಶ್ ಕಡದಕಟ್ಟೆ, ಕೊಡತಾಳ್ ರುದ್ರೇಶ್, ಎಚ್.ಎಸ್.ಕೃಷ್ಣಮೂರ್ತಿ, ಬೇಲಿಮಲ್ಲೂರು ಶಿವಾನಂದ್, ಬೆನಕನಹಳ್ಳಿ ಗಣೇಶ್, ಹೊಟ್ಯಾಪುರ ಮಲ್ಲೇಶ್, ಬಸವನಹಳ್ಳಿ ಪ್ರಕಾಶ್, ತರಗನಹಳ್ಳಿ ಅಶೋಕ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

error: Content is protected !!