ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೊತ್ಸಾಹಿಸಬೇಕು

ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೊತ್ಸಾಹಿಸಬೇಕು

ಜಗಳೂರು : ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಗೋವಿಂದರಾಜ್ ಅಭಿಮತ

ಜಗಳೂರು, ಡಿ. 22 – ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರದಲ್ಲಿ ಸಾಮಾರ್ಥ್ಯವನ್ನು  ಗುರುತಿಸಿ ಪ್ರೊತ್ಸಾಹಿಸಬೇಕು. ಕಠಿಣ ಪರಿಶ್ರಮದಿಂದ ಸಾಧನೆ ಸುಲಭ ಎಂದು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಗೋವಿಂದರಾಜ್ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಸಿದ್ದಾರ್ಥ  ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ದೀಪದಾನ ಕಾರ್ಯಕ್ರಮದಲ್ಲಿ ಅವರು ಪ್ರಶಿಕ್ಷಣಾರ್ಥಿಗಳೊಂದಿಗೆ  ಸಂವಾದ ನಡೆಸಿದರು.

ಗ್ರಾಮೀಣ ಭಾಗದಲ್ಲಿ ಉದಯೋನ್ಮುಖ  ಪ್ರತಿಭೆಗಳಿದ್ದು ಉದ್ಯೋಗಕ್ಕಾಗಿ ಸ್ಥಳೀಯ ಪ್ರದೇಶ ಅವಲಂಬಿಸದೆ ದೇಶದ ಯಾವುದೇ ಭಾಗದಲ್ಲಿ ವೃತ್ತಿ ಆರಂಭಿಸಿ ಆಸ್ತಿಯಾಗಬೇಕು ಎಂದರು.

ಇಸ್ರೋ ಸಂಸ್ಥೆಯಲ್ಲಿ  ನನ್ನೊಳಗೊಂಡಂತೆ ಸಹಸ್ರಾರು ಇಂಜಿನಿಯರ್‌ಗಳು ಸೇವೆ ಗೈಯುತ್ತಿದ್ದು. ಸಂಸ್ಥೆಯ ಹಿರಿಯ ವಿಜ್ಞಾನಿ ಕಿರಣ್ ಕುಮಾರ್ ಅವರೊಂದಿಗೆ ಸತತ ಪ್ರಯತ್ನದಿಂದ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-2 ಉಪಗ್ರಹ  ಉಡಾವಣೆ ಗೊಂಡು ವಿಶ್ವ ಯೋಜನೆಯಾಗಿ ಹೊರಹೊಮ್ಮಿದೆ. ಇದರಿಂದ ಚಂದ್ರನ‌ ಮೇಲ್ಮೈಯಲ್ಲಿ ನೀರಿನ ಅಂಶ ಗುರುತಿಸಲು ಕಾರಣವಾಯಿತು. ಇದೀಗ ಚಂದ್ರಯಾನ-3, ಆದಿತ್ಯ ಎಲ್ -1, ಗಗನಯಾನ ರೂಪರೇಶಗಳು  ಆರಂಭವಾಗಲು ಸಹಕಾರಿಯಾಯಿತು. ಸೋವಿಯತ್, ಅಮೇರಿಕಾ ದೇಶಗಳು ಭಾರತದ ಇಸ್ರೋ ಸಂಸ್ಥೆಯನ್ನು ಶ್ಲಾಘಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಅಮರಭಾರತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ  ಶ್ವೇತಾ ಮಧು ಮಾತನಾಡಿ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ  ಪೋಷಕರೊಂದಿಗೆ ಶಿಕ್ಷಕರ ಪಾತ್ರ ಅಪಾರವಾಗಿದೆ. ತರಗತಿಯಲ್ಲಿ ಶಿಕ್ಷಕರು ಮಕ್ಕಳಿಗೆ  ವಿಷಯ ಪಾಂಡಿತ್ಯದೊಂದಿಗೆ ಬೋಧಿಸಬೇಕು ಎಂದರು.

ನಳಂದ ಪಿಯು ಕಾಲೇಜು  ಪ್ರಾಂಶುಪಾಲ ಸಿ. ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಣ ಪದವಿ ಪಡೆದ ನಂತರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಅಧ್ಯಯನ ದೊಂದಿಗೆ ಸಾಧಿಸುವ ಛಲ ತಮ್ಮದಾಗಬೇಕಿದೆ ಎಂದರು.

ಸಮಾರಂಭದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಭಾರತೀಜಿ, ಪ್ರಾಂಶುಪಾಲ ಎಸ್.ಆರ್. ಕಲ್ಲೇಶಿ, ಉಪನ್ಯಾಸಕರಾದ ರಾಜೇಶ್ ಜೈನ್, ಕೊಟ್ರೇಶ್, ರಾಜಕುಮಾರ, ಬಸಪ್ಪ, ರಾಘವೇಂದ್ರ, ಕಾಶಿನಾಥ್, ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಇದ್ದರು.

error: Content is protected !!