ಮಲೇಬೆನ್ನೂರಿನಲ್ಲಿ ಗ್ರಾಮದೇವತೆ ಶ್ರೀ ಏಕನಾಥೇಶ್ವರಿ ಕಾರ್ತಿಕೋತ್ಸವ

ಮಲೇಬೆನ್ನೂರಿನಲ್ಲಿ ಗ್ರಾಮದೇವತೆ ಶ್ರೀ ಏಕನಾಥೇಶ್ವರಿ ಕಾರ್ತಿಕೋತ್ಸವ

ಮಲೇಬೆನ್ನೂರು, ಡಿ. 22 – ಪಟ್ಟಣದ ಗ್ರಾಮದೇವತೆ ಶ್ರೀ ಏಕನಾಥೇಶ್ವರಿ ಅಮ್ಮನವರ ಕಾರ್ತಕೋತ್ಸವ ಶುಕ್ರವಾರ ಸಂಜೆ ಅಪಾರ ಭಕ್ರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಪಟ್ಟಣದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರಿಗೆ ಪೂಜೆ ಸಲ್ಲಿಸಿ, ಎಣ್ಣೆ, ಬತ್ತಿ ಹಾಕಿ ದೀಪ ಬೆಳಗಿಸಿದರು. ಬಿ.ಎಂ. ವಾಗೀಶ್‌ ಸ್ವಾಮಿ, ಬಿ.ಎಂ. ಚನ್ನೇಶ್‌ ಸ್ವಾಮಿ, ಬಿ.ಎಂ. ಹಾಲಸ್ವಾಮಿ, ಬಿ.ಎಂ. ಜಗನ್ನಾಥಸ್ವಾಮಿ ಅವರುಗಳು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಅರ್ಚಕ ಪ್ರಕಾಶ ಚಾರ್‌, ಕೆ.ಜಿ. ಪರಮೇಶ್ವರಪ್ಪ, ಬೆಣ್ಣೆಹಳ್ಳಿ, ಸಿದ್ದೇಶ್‌, ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.

error: Content is protected !!