ದಾವಣಗೆರೆ, ಡಿ. 19 – ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವ್ಯಕ್ತಿತ್ವ ಕೌಶಲ್ಯ ಭಿವೃದ್ಧಿ ಮತ್ತು ಉದ್ಯಮಶೀಲತೆಯಂತಹ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವೆಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಜೆ.ನೀಲಕಾಂತ್ ಹೇಳಿದರು.
ನಗರದ ವಿಶ್ವವಿದ್ಯಾಲಯ ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿ ಯರಿಂಗ್ ವಿಭಾಗದ ವೇದಿಕೆಯ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಕರಾತ್ಮಕ ಆಲೋಚನೆ ಎನ್ನುವುದು ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರ ನಡೆನುಡಿ, ಮಾತುಗಳು, ಯೋಚನೆಗಳು ಸದಾ ಸಕಾರಾತ್ಮಕ ಚಿಂತನೆ ಹೆಚ್ಚಿದಷ್ಟು ಬದುಕಿನಲ್ಲಿ ಕಾನ್ಡೆನ್ಸ್ ಹೆಚ್ಚುತ್ತದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಲೇಜಿನ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ.ಶೇಖರಪ್ಪ ಬಿ. ಮಲ್ಲೂರ ಮಾತನಾಡಿ, ಜ್ಞಾನ ಭಯಗೊಳ್ಳಲು ಬಿಡುವುದಿಲ್ಲ. ಅಧ್ಯಾತ್ಮ ಮೋಹಗೊಳ್ಳಲು ಬಿಡುವುದಿಲ್ಲ. ಸತ್ಯ ದುರ್ಬಲ ಗೊಳ್ಳಲು ಬಿಡುವುದಿಲ್ಲ. ವಿಕಾಸ ದುಃಖಿಯಾಗಲು ಬಿಡುವುದಿಲ್ಲ, ಕರ್ಮ ಸೋಲಲು ಬಿಡುವುದಿಲ್ಲ. ಆದುದರಿಂದ ವಿದ್ಯಾರ್ಥಿಗಳು ಇನ್ನೊಬ್ಬರ ವಿಷಯಕ್ಕೆ ಅನಾವಶ್ಯಕವಾಗಿ ತಲೆ ಹಾಕದೇ ಇದ್ದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವೆಂದು ಪ್ರತಿಪಾದಿಸಿದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಮಂಜುನಾಥ, ಪ್ರಾಧ್ಯಾ ಪಕರು ಹಾಗೂ ವೇದಿಕೆಯ ಸಲಹೆಗಾರ ರಾದ ಡಾ.ಹೆಚ್.ಆರ್. ಪ್ರಭಾಕರ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಚೇರ್ಮನ್ ಹಾಗೂ ಪ್ರಾಧ್ಯಾಪಕರಾದ ಡಾ.ಈರಮ್ಮ ಹೆಚ್. ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಡಿ.ಪಿ. ನಾಗರಾಜಪ್ಪ ವಹಿಸಿ ಮಾತನಾಡಿ, ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಆತ್ಮವಿಶ್ವಾಸದಿಂದಲೇ ಬದುಕಿನ ಕರಿಯರ್‍ನಲ್ಲಿ ಯಾವುದೇ ಸವಾಲು ಎದುರಾದರೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಾ.ಲೋಕೇಶಪ್ಪ, ಡಾ.ಸಿ.ಎಮ್.ರವಿಕುಮಾರ್ ಡಾ.ರಶ್ಮಿಶೆಟ್ಟಿ, ಡಾ.ತೇಜಸ್ವಿನಿ, ಡಾ.ಎನ್. ವೆಂಕಟರಾಮಣ, ಮಧುಕರನ್ ಮುಂತಾದವರು ಉಪಸ್ಥಿತರಿದ್ದರು.
ಆರ್. ರಕ್ಷಿತ ಪ್ರಾರ್ಥಿಸಿದರು, ಸಾಂಘವಿ ಸ್ವಾಗತಿಸಿದರು. ಉಮಾದೇವಿ ಜಿ.ಬಿ.ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಉಮಾದೇವಿ ಜಿ.ಬಿ. ಮತ್ತು ವಾಸಂತಿ ಕಾರ್ಯಕ್ರಮ ನಿರೂಪಿಸಿದರು. ರೋಶಿನಿ, ಸಿದ್ಧಿಕ್ ಮತ್ತು ತಮೆಯಾನ ವಂದಿಸಿದರು.