ಮಲೇಬೆನ್ನೂರು, ಡಿ. 19 – ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಕಾರ್ತಿಕೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ರಾಯದುರ್ಗದ ಶ್ರೀ ಶಬರಿ ಭಜನಾ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಹುಬ್ಬಳ್ಳಿ ಗಂಟಿಕೇರಿಯ ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಪ್ರಥಮ ಬಹುಮಾನ ಪಡೆದವು.
ಗೋಣ್ಣಾಗರ ಶ್ರೀ ಬಸವೇಶ್ವರ ಭಜನಾ ಮಂಡಳಿ ಮತ್ತು ಹಳೇ ಹುಬ್ಬಳ್ಳಿಯ ಶ್ರೀ ಹರಿ ತೋಷಿನಿ ಮಹಿಳಾ ಭಜನಾ ಮಂಡಳಿ ದ್ವಿತೀಯ ಬಹುಮಾನಕ್ಕೆ ಆಯ್ಕೆಯಾದವು. ನಿಚ್ಚಣಿಕೆಯ ಶ್ರೀ ಬಸವೇಶ್ವರ ಭಜನಾ ಮಂಡಳಿ ಹಾಗೂ ಹಿತ್ತಲದ ಶ್ರೀ ಬನಶ್ರೀ ಮಹಿಳಾ ಭಜನಾ ಮಂಡಳಿ ತೃತೀಯ ಬಹುಮಾನಕ್ಕೆ ಭಾಜನರಾದವು.
ಸೋಮವಾರ ರಾತ್ರಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಥಮ ಸ್ಥಾನ ಪಡೆದ ತಂಡಗಳಿಗೆ ತಲಾ 25 ಸಾವಿರ ರೂ. ನಗದು ಹಾಗೂ ನೆನಪಿನ ಕಾಣಿಕೆ ಮತ್ತು ತೃತೀಯ ಸ್ಥಾನಕ್ಕೆ ಆಯ್ಕೆಯಾದ ತಂಡಗಳಿಗೆ ತಲಾ 10 ಸಾವಿರ ರೂ. ನಗದು ಹಾಗೂ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್. ಸುರೇಶ್ ಹಾಗೂ ಟ್ರಸ್ಟ್ ಸದಸ್ಯರು ಕಲಾವಿದ ಎಸ್. ಅಜೇಯ್ ಮತ್ತಿತರರು ಈ ವೇಳೆ ಹಾಜರಿದ್ದರು.