ದಾವಣಗೆರೆ, ಡಿ.19- ನಗರದ ಜಿಎಂಐಟಿ ಕಾಲೇಜಿಗೆ ಐಸಿಟಿ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್ ಮತ್ತು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟಿಮನಿ ಟಿ. ಆರ್ ಅವರಿಗೆ ಬೆಸ್ಟ್ ಅಕಾಡೆಮಿಕ್ ಕೋ-ಆರ್ಡಿನೇಟರ್ ಅವಾರ್ಡ್ ಲಭಿಸಿದೆ. ಬೆಂಗಳೂರಿನ ಐಟಿಸಿ ಗಾರ್ಡೇನಿಯ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸಮಾರಂಭ ದಲ್ಲಿ ಜಿಎಂಐಟಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಕೆ. ದಿವ್ಯಾನಂದ, ರೋಬೋಟಿಕ್ಸ್ ಅಂಡ್ ಆಟೋಮೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ್ ಡಿ.ಜಿ, ಜಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸಂಯೋಜಕ ಪ್ರೊ. ಪ್ರಮೋದ್, ಪ್ರೊ ಸಚಿನ್, ಜಿಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರೊ. ಅಶೋಕ್, ಪ್ರೊ. ಯಾಸ್ಮಿನ್, ಪ್ಲೇಸ್ಮೆಂಟ್ ಸಂಯೋಜಕ ಆಕಾಶ್ ಗೌಡ ಉಪಸ್ಥಿತರಿದ್ದರು.
January 8, 2025