ದಾವಣಗೆರೆ, ಡಿ. 19 – ನಗರದ ರಾಮಕೃಷ್ಣ ಹೆಗಡೆ ನಗರ ಆವರಗೊಳ್ಳ ಸಮೀಪ ದಲ್ಲಿರುವ ಸ್ಥಳಕ್ಕೆ ವರ್ಗಾವಣೆ ಹೊಂದಿದ್ದು ಮೂಲಭೂತ ಸೌಕರ್ಯಗಳ ಸಮಸ್ಯೆಯಿಂದ ಬಳಲುತ್ತಿರುವ ಅಲ್ಲಿನ ನಿವಾಸಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ದಾವಣಗೆರೆ ಗ್ರಾಮಾಂತರ ಇವರ ವತಿಯಿಂದ ದಿನನಿತ್ಯದ ಬಳಕೆ ಮಾಡುವ ದಿನಸಿ ಕಿಟ್‌ಗಳನ್ನು 380 ಕುಟುಂಬಗಳಿಗೆ ದಾವಣ ಗೆರೆ ಜಿಲ್ಲೆಯ ಯೋಜನೆಯ ನಿರ್ದೇಶಕ ಲಕ್ಷ್ಮಣ್ ಎಂ. ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ್, ನಮ್ಮ ಯೋಜನೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಎಲ್.ಎಚ್. ಮಂಜುನಾಥ್ ಹಾಗೂ ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕ ಶ್ರೀಮತಿ ಗೀತಾ ಅವರು ಸುಮಾರು 380 ಕುಟುಂಬಗಳಿಗೆ 3 ಲಕ್ಷ ಮೌಲ್ಯದ ಆಹಾರದ ಕಿಟ್‌ಗಳನ್ನು ನೀಡಲು ಅವಕಾಶ ನೀಡಿರುತ್ತಾರೆ ಎಂದು ತಿಳಿಸಿದರು.
ದಾವಣಗೆರೆ ಅಲ್ಪಸಂಖ್ಯಾತರ ವರ್ಗದ ಉಪಾಧ್ಯಕ್ಷ ಸೈಯದ್ ಆರಿಫ್ ಲಾಲ್, ದಾವಣಗೆರೆ ಗ್ರಾಮಾಂತರ ತಾಲ್ಲೂಕು ಯೋಜನಾಧಿಕಾರಿ ಶ್ರೀಮತಿ ಯಶೋಧ, ಶ್ರೀನಿವಾಸ್, ಶ್ರೀಮತಿ ಚೇತನ್ ಶಿವಕುಮಾರ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.