ಹರಪನಹಳ್ಳಿ, ಡಿ. 19 – ವಿಜಯನಗರ ಶ್ರೀ ಕೃಷ್ಣದೇವ ರಾಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ್ ಮಹಾವಿದ್ಯಾಲ ಯಗಳ ಪುರುಷ ಮತ್ತು ಮಹಿಳೆಯರ ತಂಡದ ಚೆಸ್ ಚಾಂಪಿಯನ್‌ಷಿಪ್ ಪಂದ್ಯಗಳನ್ನು ನಿನ್ನೆ ನಡೆಸಲಾಯಿತು.
ಈ ಚಾಂಪಿಯನ್‌ಷಿಪ್ ನಲ್ಲಿ ಹರಪನಹಳ್ಳಿ ಪ್ರಥಮ ದರ್ಜೆ ಕಾಲೇಜ್‌ನ ಮಹಿಳಾ ತಂಡ ಪ್ರಥಮ ಸ್ಥಾನವನ್ನು ಪಡೆದು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ಗೆ ಕೀರ್ತಿ ತಂದಿದ್ದಾರೆ. ವಿಜಯನಗರ ಕಾಲೇಜು ಹೊಸಪೇಟೆ ಮೂರನೇ ಸ್ಥಾನ ಪಡೆದರೆ, ಎಸ್.ಜಿ. ಕಾಲೇಜ್ ಕೊಪ್ಪಳ 2ನೇ ಸ್ಥಾನವನ್ನು ಪಡೆದಿದೆ. ಅದೇ ರೀತಿ ಪುರುಷರ ತಂಡದ ಪ್ರಶಸ್ತಿಯನ್ನು ಎಸ್.ಎಸ್.ಎ. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಬಳ್ಳಾರಿ ಪ್ರಥಮ ಸ್ಥಾನವನ್ನು ಪಡೆದರೆ, ವಿಜಯನಗರ ಕಾಲೇಜ್ ಹೊಸಪೇಟೆ ಎರಡನೇ ಸ್ಥಾನ ಪಡೆದರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕೊಪ್ಪಳ 3ನೇ ಸ್ಥಾನವನ್ನು ಪಡೆಯಿತು.
ಪ್ರಾಂಶುಪಾಲ ಡಾ. ಷಣ್ಮುಖಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸರ್ಕಾರಿ ಪದವಿ ಕಾಲೇಜ್‌ನ ಸಹಾಯಕ ಪ್ರಾಧ್ಯಾಪಕ ಡಾ. ಹರಾಳು ಬುಳ್ಳಪ್ಪ, ಡಾ. ತಿಪ್ಪೇಸ್ವಾಮಿ. ಡಾ. ಕೆ. ಸತೀಶ, ವೀರೇಶ ಸಹ ಪ್ರಾಧ್ಯಾಪಕ ನಾಗರಾಜ ಕಾಲೇಜ್ ವ್ಯವಸ್ಥಾಪಕರಾದ ಸವಿತಾ, ರಾಷ್ರೀಯ ಚದುರಂಗ ತಿರ್ಪುಗಾರ ರಪೀಕ್ ಹಾಗೂ ಇತರರು ಇದ್ದರು.