ಹರಪನಹಳ್ಳಿ, ಡಿ. 16 – ತಾಲ್ಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಅಂಧ ವಿಕಲಚೇತನ ವ್ಯಕ್ತಿ ಪಿ.ಎಸ್. ಅಶೋಕ ಮತ್ತು ಆಶಾ ಇವರ ವಿವಾಹ ನೆರವೇರಿತು. ಜಗಳೂರು ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿ ಗ್ರಾಮದ ವಧು ಆಶಾ ವಿಕಲಚೇತನ ಪಿ.ಎಸ್. ಅಶೋಕ್ ಇವರನ್ನು ಕೈಹಿಡಿದಿದ್ದಾರೆ.
ಅಶೋಕ ಪಿಯುಸಿ ಮಾಡಿದ್ದು ಹೊಲ ಮನೆಯ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಾನೆ. ಆಶಾ ಸಹ ಎಸ್ಸೆಸ್ಸೆಲ್ಸಿ ಓದಿದ್ದು, ಇಬ್ಬರು ಪರಸ್ಪರ ಒಪ್ಪಿಗೆಯಿಂದ ಬಂಧು-ಬಳಗದವರ ನಡುವೆ ಮದುವೆ ವಿಜೃಂಭಣೆಯಿಂದ ನೆರವೇರಿತು.
ಈ ಸಂದರ್ಭದಲ್ಲಿ ವಧು-ವರರಿಗೆ ಶುಭ ಹಾರೈಸಿದ ಎಂ.ಆರ್.ಡಬ್ಲ್ಯೂ. ಆರ್. ಧನರಾಜ್ ಸಾಮಾನ್ಯ ಯುವಕ-ಯುವತಿ ವಿಕಲಚೇತನರನ್ನು ವಿವಾಹ ನೀಡುವ 50 ಸಾವಿರ ರೂಪಾಯಿಗಳನ್ನು ವಿವಾಹ ಪ್ರೋತ್ಸಾಹ ಧನವನ್ನು ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿಗಳ ಮೂಲಕ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೀರೇಶ್ ಸದಸ್ಯ ಎಸ್. ಸುರೇಶ್, ಕೆ.ಪಿ. ರಂಜಿತಾ, ವಿಆರ್ಡಬ್ಲ್ಯೂ ಹೊಸಕೋಟೆ ಪಿ.ಎಸ್. ಲೋಕೇಶ್, ಸರೋಜಮ್ಮ ಗೊರವಪ್ಪ, ಬಂಧು ಬಳಗದವರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.