ಮಲೇಬೆನ್ನೂರು, ಡಿ.15- ದೇವರಬೆಳಕೆರೆ ಗ್ರಾಮದ ಗ್ರಾ.ಪಂ. ಕಚೇರಿಗೆ ಶುಕ್ರವಾರ ಆಗಮಿಸಿದ್ದ ಹರಿಹರ ತಾ.ಪಂ. ನೂತನ ಇಓ ರಮೇಶ್ ಅವರು, ಡಿಜಿಟಲ್ ಗ್ರಂಥಾಲಯಕ್ಕೂ ಭೇಟಿ ನೀಡಿ, ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾ.ಪಂ. ಸಹಾಯಕ ನಿರ್ದೇಶಕ ಜಿ.ಆರ್.ಸುನೀಲ್, ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ಸೀತಮ್ಮ, ಆರ್.ಆರ್.ತಿಪ್ಪೇಶ್, ಗ್ರಾ.ಪಂ. ಸದಸ್ಯರಾದ ಐ.ಎಸ್.ಮಲ್ಲಿಕಾರ್ಜುನ್, ಬಿ.ಪಿ.ವಾಗೀಶ್, ಗ್ರಾ.ಪಂ. ಎಸ್‌ಡಿಎ ಯಶೋಧ, ಗ್ರಂಥಾಲಯದ ಮೇಲ್ವೆಚಾರಕ ಎಸ್.ಎಫ್.ಗಣೇಶ್ ಈ ವೇಳೆ ಹಾಜರಿದ್ದರು.
January 16, 2025