ಮಲೇಬೆನ್ನೂರು, ಡಿ.15- ಇಲ್ಲಿನ ಸುನ್ನಿ ಜಾಮೀಯಾ ಶಾದಿ ಮಹಲ್ನಲ್ಲಿ ಶುಕ್ರವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ (ದಾವಣಗೆರೆ) ಹಾಗೂ ಹೆಚ್ಡಿಎಫ್ಸಿ ಬ್ಯಾಂಕ್ (ದಾವಣಗೆರೆ) ಮತ್ತು ಬೈತ್ ಉಲ್ ಮಾಲ್ ಲೈಫ್ಲೈನ್ ಇಮದಾದ್ (ಮಲೇಬೆನ್ನೂರು) ಇವರುಗಳ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿ ಮಾನವೀಯತೆ ಮೆರೆದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಾವಣಗೆರೆ ನಿರ್ದೇಶಕರಾದ ಮೊಹಮದ್ ಇನಾಯತ್ವುಲ್ಲಾ, ಡಿ.ಎನ್.ಶಿವಾನಂದ್, ಬೈತ್ ಉಲ್ಮಾಲ್ ಲೈಫ್ ಲೈನ್ ಇಮದಾದ್ ಸಂಸ್ಥೆಯ ಎಂ.ಬಿ.ದಾದಾಪೀರ್, ಸೈಯದ್ ಸೈಫುಲ್ಲಾ, ಹಜರತ್ ಅಲಿ, ಮುಸ್ತಾಫ್ ದೊಡ್ಮಮನಿ, ಮುಬಾರಕ್ ಖಾನ್, ಜಫರುಲ್ಲಾ, ವೈದ್ಯಾಧಿಕಾರಿ ಡಾ. ಪಿ.ಕೆ.ಬಸವರಾಜ್, ಆಪ್ತ ಸಮಾಲೋಚಕರಾದ ಎನ್.ಜಿ.ಶಿವಕುಮಾರ್, ಆರ್.ವಿನಾಯಕ, ಕೆ.ಗಿರೀಶ್, ಜ್ಯೋತಿ, ಪದ್ಮ, ಹೆಚ್ಡಿಎಫ್ಸಿ ಬ್ಯಾಂಕಿನ ರಾಘವೇಂದ್ರ ವರ್ಣೇಕರ್ ಈ ವೇಳೆ ಹಾಜರಿದ್ದರು.
ಮಲೇಬೆನ್ನೂರಿನಲ್ಲಿ ರಕ್ತದಾನ ಶಿಬಿರ
