ಮಲಬಾರ್ ಗೋಲ್ಡ್‌ನಲ್ಲಿ ಆರ್ಟಿಸ್ಟ್ರಿ ಬ್ರಾಂಡೆಡ್ ಜ್ಯುವೆಲ್ಲರಿ ಶೋ

ಮಲಬಾರ್ ಗೋಲ್ಡ್‌ನಲ್ಲಿ ಆರ್ಟಿಸ್ಟ್ರಿ ಬ್ರಾಂಡೆಡ್ ಜ್ಯುವೆಲ್ಲರಿ ಶೋ

ದಾವಣಗೆರೆ, ಡಿ. 15 – ಮಲಬಾರ್‌ ಗೋಲ್ಡ್ ಅಂಡ್ ಡೈಮಂಡ್ಸ್‍ರವರ ಆರ್ಟಿಸ್ಟ್ರಿ ಬ್ರಾಂಡೆಡ್ ಜ್ಯುವೆಲ್ಲರಿ ಶೋ ಚಿನ್ನ, ವಜ್ರ ಮತ್ತು ಅಮೂಲ್ಯ ರತ್ನಾಭರಣಗಳ ವಿಶಿಷ್ಟ ಪ್ರದರ್ಶನವನ್ನು ನಗರದ ಮಂಡಿಪೇಟೆ ಶೋರೂಂನಲ್ಲಿ ಇಂದು ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾದ ಪ್ರಿಯಾ ಗೌಡ, ಶ್ರೇಯಾ ನಾಯ್ಕ್, ಅಮಂಶೂ ಪಾಟೀಲ್, ಡಾ. ಸ್ವಾತಿ ಮಹೇಂದರ್‍ಕರ್, ಮಲಬಾರ್‌ ಗೋಲ್ಡ್  ಅಂಡ್ ಡೈಮಂಡ್ಸ್ ಗ್ರಾಹಕರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗಿತ್ತು. 

ಸೂಕ್ಷ್ಮಾತೀತ ಕುಸುರಿ ಕೆಲಸಗಳಿಂದ ನಿರ್ಮಿತ ಆಭರಣಗಳು ಕುಶಲಕರ್ಮಿಗಳ ಕೌಶಲ್ಯವನ್ನು ಪ್ರತಿಪಾದಿಸುತ್ತವೆ. ಪ್ರತಿ ಆಭರಣವು ಅವರ ನೈಪುಣ್ಯತೆ ಮತ್ತು ಕುಶಲತೆಗೆ ಮೆರುಗು ನೀಡಿ ಈ ಪ್ರದರ್ಶನದ ವಿಷಯವಾದ ಪ್ರತಿ ಆಭರಣದಲ್ಲೂ ಕಲೆಯಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.  ಆರ್ಟಿಸ್ಟ್ರಿ ಶೋ ಇಂದಿನಿಂದ ಇದೇ ದಿನಾಂಕ 18ರ ವರೆಗೆ ನಡೆಯಲಿದೆ.

ಮಲಬಾರ್‌ ಗೋಲ್ಡ್ ಅಂಡ್ ಡೈಮಂಡ್ಸ್ ಬರುವ ಲಾಭದಲ್ಲಿನ ಶೇ.5 ರಷ್ಟು ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದೆ. ಇದರಲ್ಲಿ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಬಡವರಿಗೆ ಮನೆಗಳ ನಿರ್ಮಾಣ ಮತ್ತು ರಕ್ಷಣಾ ವಾತಾವರಣವನ್ನು ಸೃಷ್ಟಿಸುವ ಕಾರ್ಯಗಳಿಗೆ ಈ ಹಣವನ್ನು ವಿನಿಯೋಗಿಸುತ್ತಿದೆ.

ಜ್ಯುವೆಲ್ಲರಿ ಶೋನಲ್ಲಿ ಶೋರೂಂ ಹೆಡ್ ಬೇಸಿಲ್ ರಾಜನ್‍ ಮತ್ತು ಇತರೆ ಮ್ಯಾನೇಜ್‍ಮೆಂಟ್ ಸದಸ್ಯರು ಉಪಸ್ಥಿತರಿದ್ದರು. 

error: Content is protected !!