ಬೀರೂರು – ಸಮ್ಮಸಗಿ ರಸ್ತೆ ದುರಸ್ತಿಗೆ ಆಗ್ರಹಿಸಿ ವಿನೂತನ ಪ್ರತಿಭಟನೆ

ಬೀರೂರು – ಸಮ್ಮಸಗಿ ರಸ್ತೆ ದುರಸ್ತಿಗೆ ಆಗ್ರಹಿಸಿ ವಿನೂತನ ಪ್ರತಿಭಟನೆ

ಹರಿಹರ, ಡಿ.14- ನಗರದ ತುಂಗಭದ್ರಾ ನದಿ ಪಕ್ಕದ ಬೀರೂರು- ಸಮ್ಮಸಗಿ ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಪಡಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಂದೆ ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ಇದ್ದು ಸತ್ತಂತಾಗಿದೆ ಎಂದು ತಿಥಿ ಆಚರಣೆ ಮಾಡಿ ಕೇಶಮಂಡನೆ ಮಾಡಿಕೊಳ್ಳುವುದರ ಮೂಲಕ ಇಂದು ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆ ಮುಖಂಡ ಗೋವಿಂದ, ಎಂ.ಆರ್ ಆನಂದ್, ಶಬರೀಶ, ಸುನಿಲ್, ಭಾರತ್, ಅಪ್ಪು, ರಾಜು, ಪ್ರದೀಪ್, ಗಿರೀಶ್, ನಾಗರಾಜ್, ಕಾರ್ತಿಕ್, ಶ್ರೀನಿವಾಸ್ ಇತರರು ಹಾಜರಿದ್ದರು. 

error: Content is protected !!