ಹರಿಹರ,ಡಿ.14- ತಾಲ್ಲೂಕು ಮಾದಿಗ ಸಮಾಜದ ವತಿಯಿಂದ ಶಿವಶರಣ ಮಾದಾರ ಚೆನ್ನಯ್ಯ ಜಯಂತಿ ಅಂಗವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಮಾದಿಗರ ಜನ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮಾದಿಗ ಸಮಾಜದ ಅಧ್ಯಕ್ಷ ಎಂ.ಎಸ್. ಆನಂದ್ ಕುಮಾರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಶರಣ ಮಾದಾರ ಚೆನ್ನಯ್ಯ ಜಯಂತಿ ಅಂಗವಾಗಿ 4 ನೇ ಬಾರಿಗೆ ಸರ್ವ ಧರ್ಮ ಸರಳ ಸಾಮೂಹಿಕ ವಿವಾಹ ಹಾಗೂ ಮಾದಿಗರ ಜನಜಾಗೃತಿ ಸಮಾವೇಶವನ್ನು ಬರುವ ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಸಿದ್ದೇಶ್ವರ ಪ್ಯಾಲೇಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಎ.ಕೆ.ನಾಗೇಂದ್ರಪ್ಪ ರಾಜನಹಳ್ಳಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆಯಾದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು ಎಂದು ಅವರು ಹೇಳಿದ್ದಾರೆ.
ಕೊಕ್ಕನೂರ್ ಬಿ.ಡಿ. ಬಸವರಾಜ್ ಮಾತನಾಡಿ, ಇಚ್ಛೆಯುಳ್ಳವರು ಮಾರ್ಚ್ 1 ರ ಒಳಗಾಗಿ ಹೆಸರನ್ನು ಮೊಬೈಲ್ ಸಂಖ್ಯೆ 7483386695, 7406609623, 7349487591, 9342696588 ಗಳಿಗೆ ಕರೆ ಮಾಡಿ ನೋಂದಾಯಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಚ್.ಶಿವಪ್ಪ, ಉಪಾಧ್ಯಕ್ಷ ಎಂ.ಎಸ್.ಶ್ರೀನಿವಾಸ್, ಹನುಮಂತಪ್ಪ ದೊಡ್ಡಮನೆ, ಖಜಾಂಚಿ ಎ. ಪರಶುರಾಮ್, ನಿರ್ದೇಶಕರಾದ ಏ.ಕೆ. ನಾಗೇಂದ್ರಪ್ಪ, ಚೌಡಪ್ಪ ಮೇಗಳಮನಿ ಇತರರು ಉಪಸ್ಥಿತರಿದ್ದರು.