ಹೊನ್ನಾಳಿ, ಡಿ.14- ಕಾನೂನಿನ ಬಗ್ಗೆ ಎಲ್ಲರೂ ಮಾಹಿತಿಯನ್ನು ತಿಳಿದುಕೊಂಡರೆ ಕೋರ್ಟ್, ಕಚೇರಿಗಳಿಗೆ ಅಡ್ಡಾಡುವುದನ್ನು ತಪ್ಪಿಸಿಕೊಳ್ಳ ಬಹುದು ಎಂದು ಜೆ.ಎಂ.ಎಫ್.ಸಿ.ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಚ್. ದೇವದಾಸ್ ತಿಳಿಸಿದರು.
ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯ ದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಕಾನೂನನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ತಿಳಿಸಿದರು. ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವುದರ ಮೂಲಕ ಅಪರಾಧಗಳನ್ನು ತಡೆಗಟ್ಟಬಹುದಾಗಿದೆ.
ಈ ನಿಟ್ಟಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿಯು ಉಚಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜೆ.ಎಂ.ಎಫ್.ಸಿ. ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಸ್.ಎನ್. ಪುಣ್ಯಕೋಟಿ ಮಾತನಾಡಿ, ಕೋರ್ಟ್ಗಳಲ್ಲಿ ಬಗೆಹರಿಯದ ಎಷ್ಟೋ ಪ್ರಕರಣಗಳು ರಾಜೀ ಸಂಧಾನದ ಮೂಲಕ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಬಗೆಹರಿಯುತ್ತವೆ. ಇದರಿಂದ ಜನಸಾಮಾನ್ಯರ ಸಂಬಂಧ, ಹಣ ಮತ್ತು ಸಮಯದ ಉಳಿತಾಯವಾಗುತ್ತದೆ ಎಂದು ತಿಳಿಸಿದರು.
ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಇತ್ಯರ್ಥಗೊಂಡ ಪ್ರಕರಣಗಳು: ಚೆಕ್ ಅಮಾನ್ಯ-2, ಬ್ಯಾಂಕ್ ಪ್ರಕರಣಗಳು-5, ಹಣ ವಸೂಲಾತಿ-1, ಮರಳು ಸಾಗಾಣಿಕೆ ಮತ್ತು ಗಣಿಗಾರಿಕೆ-17, ಪಾಲು ವಿಭಾಗ-8, ಇತರೆ ಸಿವಿಲ್ ಪ್ರಕರಣಗಳು-19, ಜೀವನಾಂಶ ಪ್ರಕರಣಗಳು-11, ಇತರೆ ಲಘು ಅಪರಾಧಿಕ ಪ್ರಕರಣಗಳು-80, ರಾಜೀಯಾಗಬಲ್ಲ ಐ.ಪಿ.ಸಿ.ಪ್ರಕರಣಗಳು-5, ಜನನ ಮತ್ತು ಮರಣ ಪ್ರಕರಣಗಳು-38, ಪಿ.ಸಿ.ಆರ್. ಪ್ರಕರಣಗಳು-01. ಒಟ್ಟು 979 ಪ್ರಕರಣಗಳು ಬಗೆಹರಿದಿವೆ.
ಸರ್ಕಾರಿ ಸಹಾಯಕ ಅಭಿಯೋಜಕರಾದ ಕೆ.ಸಿ. ಭರತ್ ಭೀಮಯ್ಯ, ಜಿ.ಎನ್.ವಾಣಿ, ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಜಯಪ್ಪ, ಉಪಾಧ್ಯಕ್ಷ ಮಡಿವಾಳ್ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಪುರುಷೋತ್ತಮ್, ಸಹಕಾರ್ಯದರ್ಶಿ ತಿಮ್ಮಪ್ಪ ಪಟೇಲ್, ಖಜಾಂಚಿ ಭೋಜ್ಯಾನಾಯ್ಕ್, ವಕೀಲರಾದ ಎಸ್.ಎಸ್.ಬಳ್ಳೂರ್, ಉಮಾಕಾಂತ್ ಜೋಯ್ಸ್, ಶ್ರೀನಿವಾಸ ಮೂರ್ತಿ, ಈಶ್ವರನ್, ಶಿವಯೋಗಾರಾಧ್ಯ, ನೀಲಕಂಠಸ್ವಾಮಿ, ಮಹಾಬಲೇಶ್, ಸೈಯದ್ ಗೌಸ್, ರವಿ, ಮಂಜುನಾಥ್, ಗಣೇಶ್, ಎಸ್.ಎನ್.ಪ್ರಕಾಶ್, ಜಯಪ್ಪ, ಚೇತನ್ ಕುಮಾರ್, ಹಳದಪ್ಪ, ಕರುಣಾಕರನ್, ಉಮೇಶ್, ಗುಡ್ಡಪ್ಪ, ಬಸವನಗೌಡ, ಸುನಿಲ್, ಷಣ್ಮುಖನಾಯ್ಕ್, ಭುವನೇಶ್ವರ್ ಸ್ವಾಮಿ, ಶಿವಪ್ಪ, ಮೇಘರಾಜ್, ದೊರೆಸ್ವಾಮಿ, ರವಿನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.