ದಾವಣಗೆರೆ, ಡಿ.14- ಶಿವಮೊಗ್ಗದಲ್ಲಿ ನಳಂದ ಚೆಸ್ ಅಕಾಡೆಮಿ ವತಿಯಿಂದ ಮೊನ್ನೆ ನಡೆಸಿದ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿ 16 ವರ್ಷದ ಒಳಗಿನ ವಿಭಾಗದಲ್ಲಿ ಎಂ.ಎಸ್. ದಿಗಂತ್ 9ನೇ ಸ್ಥಾನ ಪಡೆದಿದ್ದಾನೆ.
ಈ ಪಂದ್ಯಾವಳಿಯಲ್ಲಿ ಎಂ.ಎನ್. ಶರತ್ ಕುಮಾರ್, ಎಂ.ಎಸ್. ಜೀವನ್, ಎಲ್. ಸುಜಯ್ ಅವರಿಗೆ ನಳಂದ ಚೆಸ್ ಅಕಾಡೆಮಿ ಅಧ್ಯಕ್ಷ ಕೃಷ್ಣ ಉಡುಪ ಮತ್ತು ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಯುವರಾಜ್ ಪ್ರಶಸ್ತಿ ನೀಡಿದರು.