ಭಾರತ್ ಸ್ಕೌಟ್ಸ್ – ಗೈಡ್ಸ್‍ನ ರೋವರ್ಸ್ ಘಟಕದ ಉದ್ಘಾಟನೆ

ಭಾರತ್ ಸ್ಕೌಟ್ಸ್  – ಗೈಡ್ಸ್‍ನ ರೋವರ್ಸ್ ಘಟಕದ ಉದ್ಘಾಟನೆ

ದಾವಣಗೆರೆ, ಡಿ.14- ಮಾಗನೂರು ಸರ್ವಮಂಗಳಮ್ಮ ಬಸಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಘಟಕದ ಉದ್ಘಾಟನೆ ಮತ್ತು ಪುನಶ್ಚೇತನ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ರತ್ನಾ ಎಂ. ಇವರು ಮಾತನಾಡಿ, ರೋವರ್ಸ್ ಘಟಕವನ್ನು ಮೊದಲು ಪ್ರಾರಂಭಿಸಿದ ಬೈಡನ್ ಪೋವೆಲ್ ಅವರ ಬಗ್ಗೆ ಹಾಗೂ ಸ್ಕೌಟ್ ಮತ್ತು ಗೈಡ್ ಬೆಳೆದುಬಂದ ದಾರಿಯನ್ನು ತಿಳಿಸಿದರು. 

ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದ ಶ್ರೀಮತಿ ಅಶ್ವಿನಿ ಜೆ., ಇವರು ಮಾತನಾಡುತ್ತಾ, ಸ್ಕೌಟ್ಸ್‍ನ ವಿಶೇಷ ಕೌಶಲ್ಯಗಳು, ಶಿಸ್ತು, ಸಂಯಮ, ಸಹಬಾಳ್ವೆ, ಮಹತ್ವವನ್ನು ಕುರಿತು ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ನೀಲಾಂಬಿಕ ಜಿ.ಸಿ ಅವರು ಮಾತನಾಡಿ, ರೋವರ್ಸ್‍ನ ಘಟಕಕ್ಕೆ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಬೇಕು. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾಲೇಜಿನ ರೋವರ್ಸ್ ಲೀಡರ್ ಆಗಿರುವ ಪ್ರೊ. ಈಶ್ವರ ಕೆ.ವೈ., ಇತಿಹಾಸ ವಿಭಾಗದ ಮುಖ್ಯಸ್ಥರು, ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕು. ಅಂಕಿತ ಪ್ರಾರ್ಥಿಸಿದರು. ಡಾ.ಎಂ. ಮಂಜಪ್ಪ ವಂದಿಸಿದರು. ಶ್ರೀಮತಿ ಪವಿತ್ರ ಕೆ. ನಿರೂಪಿಸಿದರು. 

ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಪ್ರೊ. ರಂಗಸ್ವಾಮಿ ಟಿ.ಆರ್. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು, ಡಾ. ವಿಜಯಕುಮಾರ್.ಎ.ಬಿ, ಐ.ಕ್ಯೂ.ಎ.ಸಿ ಸಂಚಾಲಕರು ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!