ಗ್ರಾಮೀಣ ಅಂಚೆ ನೌಕರರು ಮುಷ್ಕರ ಮುಂದುವರೆಸಲು ಕರೆ

ಗ್ರಾಮೀಣ ಅಂಚೆ ನೌಕರರು ಮುಷ್ಕರ ಮುಂದುವರೆಸಲು ಕರೆ

ಹೊನ್ನಾಳಿ, ಡಿ.14- ಪಟ್ಟಣದ ಕೇಂದ್ರ ಅಂಚೆ ಕಛೇರಿ ಎದುರು ಅವಳಿ ತಾಲ್ಲೂಕಿನ ಗ್ರಾಮಿಣ ಅಂಚೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಸದಸ್ಯರು ಮೇಲಾಧಿಕಾರಿಗಳಿಂದ ಯಾವುದೇ ನೋಟಿಸ್ ಪಡೆಯದೇ, ಬೆದರಿಕೆ ಹಾಗು ಮುಷ್ಕರ ಹತ್ತಿಕ್ಕುವ ಪ್ರಯತ್ನಕ್ಕೆ ಜಗ್ಗದೇ ಹೋರಾಟವನ್ನು ಮುಂದುವರೆಸುವಂತೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ದಾವಣಗೆರೆ ವಿಭಾಗದ ಕಾರ್ಯದರ್ಶಿ ಕೆ ಲಿಂಗರಾಜ್ ಮನವಿ ಮಾಡಿದರು.

ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ 50 ಕ್ಕೂ ಹೆಚ್ಚು ಗ್ರಾಮೀಣ ಅಂಚೆ ನೌಕರರು ನಡೆಸುತ್ತಿದ್ದ 3ನೇ ದಿನದ ಪ್ರತಿಭಟನೆಯ ಪದಾ ಧಿಕಾರಿಗಳಿಗೆ ತಮ್ಮ ಆತ್ಮಸ್ಥೈರ್ಯದ ಮೂಲಕ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಹೊಸದಾಗಿ ಕೆಲಸಕ್ಕೆ ಬಂದಿರುವ ಅಂಚೆ ನೌಕರರು ಯಾವುದೇ ಆತಂಕ ಪಡೆಯದಿರಿ, ಈ ಹಿಂದೆ ಹಿರಿಯ ನೌಕರರುಗಳಾದ ನಾವು ಅನೇಕ ಹೋರಾಟ, ಮುಷ್ಕರಗಳನ್ನು ನಡೆಸಿದಾಗ ನಮಗೆ ಯಾವುದೇ ತೊಂದರೆಗಳಾಗಿಲ್ಲ. ಇದಕ್ಕೆ ನಾವೇ ಸಾಕ್ಷಿ ಇದನ್ನು ಹೊಸ ನೌಕರರಿಗೆ ತಿಳಿದವರು ವಿವರಿಸಿ ಧೈರ್ಯ ತುಂಬುವ ಪ್ರಯತ್ನ ಮಾಡಬೇಕಿದೆ ಎಂದರು.

ಯಾವುದೇ ಅಹಿತಕರ ಘಟನೆಯ ಹೋರಾಟ ನಡೆಸುವುದು ಬೇಡ, ಏಕೆಂದರೆ ಅಂಚೆ ಕೇಂದ್ರ ಕಛೇರಿ ನಮ್ಮ ಮನೆಯಂತೆ ಅಲ್ಲಿನ ದಾಖಲೆಗಳು ಮತ್ತಿತರೆ ವಸ್ತುಗಳು ಹಾನಿಯಾದರೆ, ನಮ್ಮ ಆಸ್ತಿಯೇ ಹಾನಿಯಾದಂತೆ ಎಂಬುದರ ಬಗ್ಗೆ ಗಮನವಿರಲಿ. ಕಛೇರಿಯ ಒಳಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ನಮ್ಮ ಸಹೋದರರೆಂದು ಭಾವಿಸೋಣ, ಅವರಿಂದ ಅದೇ ಪ್ರೀತಿಯ ನಿರೀಕ್ಷೆ ಸಂಘದ ನಮ್ಮ ನಿಮ್ಮೆಲ್ಲರದ್ದಾಗಲಿ ಎಂದರು.

ಜಿಲ್ಲಾ ಪದಾಧಿಕಾರಿಗಳಾದ ಟಿ.ಕೆ. ಇನಾಯತುಲ್ಲಾ, ಕೆ.ಎಂ ಬೆನಕೇಶ, ಬಿ.ಲೋಕೇಶ್ ನಾಯ್ಕ, ಎಂ.ಬಿ. ನಿಂಗಪ್ಪ, ಎ.ಬಿ. ರಾಜು, ಹೊನ್ನಾಳಿ ತಾಲ್ಲೂಕು ಗ್ರಾಮೀಣ ಅಂಚೆ ನೌಕರರಾದ ಹತ್ತೂರು ತಿಮ್ಮನಗೌಡ, ಬೇಲಿಮಲ್ಲೂರು ನಿಂಗಪ್ಪ, ಅರಕೆರೆ ರಾಜಣ್ಣ, ಹೊಳೆಹರಳಹಳ್ಳಿ ದಾದಾಪೀರ್, ಹೊನ್ನಾಳಿ ನಂದನ್, ಅರುಣ್, ಮಹಿಳಾ ಅಂಚೆ ನೌಕರರು ಉಪಸ್ಥಿತರಿದ್ದರು.

error: Content is protected !!