ದಾವಣಗೆರೆ,ಡಿ.14- ಮಾಜಿ ಮೇಯರ್ ಶ್ರೀಮತಿ ಮಾದಮ್ಮ ಅವರ ಸಹೋದರ ಮತ್ತು ಮೂಲ ಬಿಜೆಪಿ ಹಿರಿಯ ಕಾರ್ಯಕರ್ತ ಮಾದೇಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಜಿಲ್ಲಾ ಬಿಜೆಪಿ ಮೂಲ ಕಾರ್ಯಕರ್ತರು ಮಾದೇಶ್ ಅವರನ್ನು ಭೇಟಿ ಮಾಡಿ ನೆರವು ನೀಡಿದ್ದಾರೆ. ಹೆಚ್.ಎಸ್. ಲಿಂಗರಾಜು, ಬೆಣ್ಣೆ ದೋಸೆ ರವಿ, ಎಂ.ಪಿ. ಕೃಷ್ಣಮೂರ್ತಿ ಪವಾರ್, ಸರೋಜಮ್ಮ ದೀಕ್ಷಿತ್ ಮತ್ತು ಇತರರು ಮಾದೇಶ್ ಅವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ಮಾಡಿದರು.
January 11, 2025