ಪಾರಂಪರಿಕ ವೈದ್ಯ ವೃತ್ತಿಗೆ ಮುಕ್ತ ಅವಕಾಶಕ್ಕೆ ಒತ್ತಾಯ

ಪಾರಂಪರಿಕ ವೈದ್ಯ ವೃತ್ತಿಗೆ ಮುಕ್ತ ಅವಕಾಶಕ್ಕೆ ಒತ್ತಾಯ

ದಾವಣಗೆರೆ, ಡಿ. 13 – ಪಾರಂಪರಿಕ ವೈದ್ಯರ ಕೋಟಾದಲ್ಲಿ ಸುಕನ್ಯಾ ಹಿರೇಮಠ ಇವರಿಗೆ ನೀಡಿರುವ ಬಿಎಎಂಎಸ್ ಸೀಟಿನ ಕುರಿತು ಸಿಓಡಿ ತನಿಖೆಗೆ ಆದೇಶಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕದಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಿರುವ ಪರಿಷತ್‌ನ ಕಾರ್ಯಕರ್ತರು, ಸುಕನ್ಯ ಬಿನ್ ಚಂಬಯ್ಯ ಗದಿಗಯ್ಯ ಹಿರೇಮಠ ಗುಂಡೇನಹಟ್ಟಿ, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರಿಗೆ ಬಿ.ಎ.ಎಂ.ಎಸ್. ಸೀಟನ್ನು ಪಾರಂ ಪರಿಕ ವೈದ್ಯರ ಕೋಟಾದಲ್ಲಿ ಆಯೂಶ್ ಇಲಾಖೆ ನೀಡಿದ್ದು, ಈಗಾಗಲೇ ಇವರು ಪಾರಂಪರಿಕ ವೈದ್ಯರು ಅಲ್ಲವೆಂದು ಅಲ್ಲಿಯ ಗ್ರಾಮಸ್ಥರಿಂದ ಮಾಹಿತಿ ಬಂದಿದೆ. ಇದ ರಿಂದ ಮೂಲ ಪಾರಂಪರಿಕ ವೈದ್ಯರ ಮಗ ನಿಗೆ ಸಿಗಬೇಕಾದ ಅವಕಾಶ ತಪ್ಪಿದ್ದು, ಇದರ ಹಿಂದೆ ಅಲ್ಲಿನ ಗ್ರಾಮ ಪಂಚಾಯಿತಿ ಪಿ.ಡಿ.ಓ ಮತ್ತು ಇಲಾಖೆಯ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಹರಿಹಾಯಿದ್ದಾರೆ.

ಈ ಹಗರಣದಿಂದ ಮೀಸಲಾತಿ ಮೂಲ ಉದ್ದೇಶವೇ ಬುಡಮೇಲಾಗಿದ್ದು, ಮುಂದಿನ ದಿನಗಲ್ಲಿ ಪಾರಂಪರಿಕ ವೈದ್ಯರಿಗೆ ಈ ಸೌಲಭ್ಯ ಸಿಗದೇ ಬೇರೆಯವರೇ ಈ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಆದುದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಪಿ.ಡಿ.ಓ ಮತ್ತು ಬೆಳಗಾವಿ ಜಿಲ್ಲೆ ಆಯುಶ್ ಅಧಿಕಾರಿಗಳೇ ಇದಕ್ಕೆ ಹೊಣೆಗಾರರಾಗಿದ್ದು, ಇವರುಗಳನ್ನು ಸೇವೆಯಿಂದ ಅಮಾನತ್ತಿನಲ್ಲಿಟ್ಟು ಈ ಹಗರಣದ ಸಿ ಓ ಡಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸಿ ಪಾರಂಪರಿಕ ವೈದ್ಯರುಗಳಿಗೆ ನ್ಯಾಯಕ್ಕಾಗಿ ಒತ್ತಾಯಿಸಿದರು.

ಇದಲ್ಲದೇ, ಪಾರಂಪರಿಕ ವೈದ್ಯ ವೃತ್ತಿ ಯನ್ನು ಮಾಡಲು ಮುಕ್ತ ಅವಕಾಶ ನೀಡ ಬೇಕು, ಪಾರಂಪರಿಕ ವೈದ್ಯ ಪದ್ಧತಿಯನ್ನು ಉಳಿಸಿ, ಬೆಳೆಸಲು ಪಾರಂಪರಿಕ ವೈದ್ಯ ಅಭಿವೃದ್ಧಿ ಮಂಡಳಿಯನ್ನು ರಚಿಸಬೇಕು, ಪಾರಂಪರಿಕ ವೈದ್ಯರ ರಾಜ್ಯ ಸಮ್ಮೇಳನ ಗಳನ್ನು ಮಾಡಲು ರಾಜ್ಯ ಸರ್ಕಾರ ಪ್ರತಿ ವರ್ಷದ ಬಜೆಟ್‌ನಲ್ಲಿ ಅನುದಾನ ಮೀಸಲಿ ಡಬೇಕು, ಪಾರಂಪರಿಕ ವೈದ್ಯರುಗಳ ಮಕ್ಕಳು ಪಾರಂಪರಿಕ ವೈದ್ಯವನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಗಳಲ್ಲಿ (ಬಿಎಎಂಎಸ್) ಕಲಿಕೆಗಾಗಿ ಕರ್ನಾಟಕ ಸರ್ಕಾರ ಶೇ.2 ರಷ್ಟು ಸೀಟುಗಳನ್ನು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಲಾಯಿತು.

ಪರಿಷತ್‌ನ ಅಧ್ಯಕ್ಷ ಜಿ. ಮಹದೇವಯ್ಯ, ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!