ಮಲೇಬೆನ್ನೂರು, ಡಿ.12- ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಡೇ ಕಾರ್ತಿಕೋತ್ಸವದ ಅಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ದೀಪೋತ್ಸವ ಸಂಭ್ರಮದಿಂದ ಜರುಗಿತು. ದೀಪೋತ್ಸವಕ್ಕೆ ಮುನ್ನ ದೇವಸ್ಥಾನದ ಆವರಣದಲ್ಲಿ ದಾವಣಗೆರೆಯ ವಾಸವಿ ಮಹಿಳಾ ಮತ್ತು ಯುವತಿಯರ ಸಂಘಗಳ ವತಿಯಿಂದ ಮಹಿಳೆಯರು ಗಾನಾಮೃತದಿಂದ ಶಿವಾರಾಧನೆ ಕಾರ್ಯಕ್ರಮ ನಡೆಸಿಕೊಟ್ಟರು.
ದೇವಸ್ಥಾನದ ಅಧ್ಯಕ್ಷ ಬಿ. ಪಂಚಪ್ಪ, ಉಪಾಧ್ಯಕ್ಷ ಬಿ. ಚಿದಾನಂದಪ್ಪ, ಖಜಾಂಚಿ ಬಿ.ವಿ. ರುದ್ರೇಶ್, ಬಿ. ನಾಗೇಂದ್ರಪ್ಪ, ಬಿ. ನಾಗೇಶ್, ಬಿ. ಉಮಾಶಂಕರ್, ಬಿ.ಎಂ. ಹರ್ಷ, ಎನ್.ಕೆ. ಬಸವರಾಜ್, ಎಸ್.ಎನ್. ಶಂಭುಲಿಂಗಪ್ಪ ಸೇರಿದಂತೆ, ಇನ್ನೂ ಅನೇಕರು ಈ ವೇಳೆ ಹಾಜರಿದ್ದು, ಕಾರ್ಯಕ್ರಮ ನಡೆಸಿಕೊಟ್ಟರು.