ಕನ್ನಡಪರ ಹೋರಾಟಗಾರ ಬಸವರಾಜ ಐರಣಿ
ದಾವಣಗೆರೆ, ಡಿ. 12- ಮಾತೃಭಾಷೆಗೆ ಪ್ರತಿಯೊ ಬ್ಬರೂ ಮಹತ್ವ ನೀಡುವ ಮೂಲಕ ಕನ್ನಡ ಭಾಷೆ, ಪರಂಪರೆ ಉಳಿವಿಗಾಗಿ ಶ್ರಮಿಸಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಕನ್ನಡಪರ ಹೋರಾಟಗಾರ ಬಸವರಾಜ ಐರಣಿ ಹೇಳಿದರು.
ನಗರದ ಎಸ್.ಓ.ಜಿ. ಕಾಲೋನಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ನಾಡು-ನುಡಿಗೆ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಅವರ ತ್ಯಾಗ ಅರಿತು ಭಾಷೆ, ನಾಡಿನ ಅಭಿವೃದ್ಧಿಗೆ ಹೆಚ್ಚು ಆಸಕ್ತಿ ವಹಿಸಬೇಕು. ಕನ್ನಡಕ್ಕೆ ಧಕ್ಕೆ ಬಂದಾಗ ನಾವೆಲ್ಲರೂ ಒಗ್ಗೂಡಿ ಪ್ರತಿಭಟಿಸುವಂತಹ ಮನೋಭಾವ ಕಾಣಬೇಕು. ಕನ್ನಡ ನಾಡು, ನುಡಿಗೆ ಬದ್ಧರಾಗಿ ಬದುಕೋಣ, ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕುಂಬಾರ ನಾಗಣ್ಣ, ಹೆಚ್. ತಿಮ್ಮಣ್ಣ, ಬಿ. ಕಲ್ಲೇಶಪ್ಪ, ದುರುಗೋಜಪ್ಪ, ಅಶೋಕ್, ಮೌನೇಶ್, ಎಂ. ಗುರುಮೂರ್ತಿ, ಪಾಂಡುರಂಗಪ್ಪ, ಅಡುಗೆ ಬಸಣ್ಣ, ಮಹಾಂತೇಶ್, ಬಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.