ಕಾರ್ಮಿಕರಿಂದ ಬೇಡಿಕೆಗಳ ಜಾರಿಗೆ ಸಚಿವ ಪ್ರಿಯಾಂಕ ಖರ್ಗೆ ಮನವಿ

ಕಾರ್ಮಿಕರಿಂದ ಬೇಡಿಕೆಗಳ ಜಾರಿಗೆ ಸಚಿವ ಪ್ರಿಯಾಂಕ ಖರ್ಗೆ ಮನವಿ

ರಾಣೇಬೆನ್ನೂರು, ಡಿ. 10 – ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆಯ ಕೆಲಸದ ದಿನಗಳನ್ನು 2 ನೂರಕ್ಕೇರಿಸುವ, ದಿನಗೂಲಿಯನ್ನು 5 ನೂರಕ್ಕೇರಿಸುವ, ಇದುವರೆಗೂ ನೀಡದಿರುವ ಅನುಷ್ಠಾನದ ಮೇಟಿಗಳ ಗೌರವ ಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.

ಯೋಜನೆಯ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಇಲಾಖೆಯ ಶಿಷ್ಯವೇತನ ಬಿಡುಗಡೆ ಮಾಡಬೇಕು, ಸಾಮಾಜಿಕ ಭದ್ರತಾ ಯೋಜನೆಯನ್ವಯ‌‍ ಕಾರ್ಮಿಕರಿಗೆ 5 ಸಾವಿರ ನಿವೃತ್ತಿ ವೇತನ ಹಾಗೂ ಜೀವ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಹಾವೇರಿ ಜಿಲ್ಲೆ ಕೂಲಿ ಕಾರ್ಮಿಕರ ಸಂಘಟನೆ ಒತ್ತಾಯಿಸಿದೆ.

ರಾಣೇಬೆನ್ನೂರಿನ ವನಸಿರಿ ಸಂಸ್ಥೆಯ ಸಂಚಾಲಕ ಎಸ್.ಡಿ. ಬಳೆಗಾರ ನೇತೃತ್ವದಲ್ಲಿ ತೆರಳಿ ಸಚಿವ ಪ್ರಿಯಾಂಕ ಖರ್ಗೆ ಅವರ ವಿಧಾನಸೌಧದ ಕಛೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಶಂಕ್ರಯ್ಯ ಕಳಸೂರಮಠ,  ರತ್ನಾ ಮತ್ತಿಹಳ್ಳಿ, ಗುತ್ತೆಮ್ಮ ಸುಣಗಾರ, ಲಲಿತಮ್ಮ ಚನ್ನಳ್ಳಿ, ರೂಪಾ ಸರವಂದ, ದೀಪಾ ಕಜ್ಜರಿ, ಯಲ್ಲಪ್ಪ ಹುಳಬುತ್ತಿ, ನಾಗರಾಜ ಹಾವನೂರ, ಸಚಿನ್ ಬೂದಿಹಾಳ, ಹನುಮಂತಪ್ಪ ಬ್ಯಾಡಗಿ, ಅಶೋಕ ಬೂದಿಹಾಳ ಮತ್ತಿತರರಿದ್ದರು.

error: Content is protected !!