ಚಿಗಟೇರಿಯಲ್ಲಿ ವಿಜೃಂಭಣೆಯ ಶಿವನಾರದಮುನಿ ಕಾರ್ತಿಕ

ಚಿಗಟೇರಿಯಲ್ಲಿ ವಿಜೃಂಭಣೆಯ ಶಿವನಾರದಮುನಿ ಕಾರ್ತಿಕ

ಹರಪನಹಳ್ಳಿ, ಡಿ. 9 –  ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಶನಿವಾರ ಸಂಜೆ ಶ್ರೀ ಶಿವನಾರದಮುನಿ ಸ್ವಾಮಿಯ ಕಡೇ ಕಾರ್ತಿಕೋತ್ಸವವು ವಿಜೃಂಭಣೆಯಿಂದ ಜರುಗಿತು. ಕಾರ್ತಿಕೋತ್ಸವದ ಪ್ರಯುಕ್ತ ಶ್ರೀ ಶಿವನಾರದಮುನಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಾರ್ತಿಕೋತ್ಸವದಲ್ಲಿ ಶ್ರೀ ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ, ಶಾಮನೂರು ಬಸಣ್ಣ, ವಡ್ಡಿನಹಳ್ಳಿ ಶಡಕಣ್ಣ, ಕಲಪನಹಳ್ಳಿ ಬಸವಲಿಂಗಪ್ಪ, ಪಲ್ಲಾಗಟ್ಟೆ ನಾಗರಾಜ್, ಹುಣಸೆಹಳ್ಳಿ ಜಾತಪ್ಪ, ಚಿಗಟೇರಿ ದ್ಯಾಮನಗೌಡ್ರು, ಜಯಣ್ಣ ಗೌಡ್ರು, ಟ್ರಸ್ಟ್ ಸದಸ್ಯರು ಭಾಗವಹಿಸಿದ್ದರು. ಕಾರ್ತಿಕೋತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.

error: Content is protected !!