ಹರಿಹರ, ಡಿ.10- ಕಲ್ಬುರ್ಗಿಯ ವಕೀಲ ಈರಣ್ಣ ಗೌಡರ ಹತ್ಯೆಯ ಎಲ್ಲ ಹಂತಕರನ್ನು ಕೂಡಲೇ ಬಂಧಿಸಿ, ಮೃತರ ಕುಟುಂಬ ವರ್ಗದವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಹರಿಹರ ಅಡ್ವೊಕೇಟ್ಸ್ ಅಸೋಸಿಯೇಷನ್ ಆಗ್ರಹಿಸಿದೆ. ರಾಜ್ಯಪಾಲರಿಗೆ ಇಲ್ಲಿನ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿ, ವಕೀಲರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿದ್ದು, ರಾಜ್ಯಾದ್ಯಂತ ವಕೀಲರು ಪ್ರತಿಭಟನೆ ನಡೆಸುತ್ತಿದ್ದರೂ ಸಹ ಪೊಲೀಸ್ ಇಲಾಖೆ ಸಮಂಜಸ ಕ್ರಮ ತೆಗೆದುಕೊಂಡಿರುವುದಿಲ್ಲ. ಸರ್ಕಾರವು ಈ ಚಳಿಗಾಲದ ಅಧಿವೇಶನದಲ್ಲಿಯೇ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಸಂಘದ ಅಧ್ಯಕ್ಷ ಪಿ. ರುದ್ರಗೌಡ, ಉಪಾಧ್ಯಕ್ಷೆ ಎನ್.ಎಸ್. ಸಾಕಮ್ಮ, ಕಾರ್ಯದರ್ಶಿ ಗಣೇಶಪ್ಪ ಕೆ.ದುರ್ಗದ್, ಜಂಟಿ ಕಾರ್ಯದರ್ಶಿ ಪಿ.ಹೆಚ್.ಬಾಲಾಜಿ ಸಿಂಗ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ರಹೀಮ್ ಬಾಷಾ, ಕೆ.ವಿ ನಾಗರಾಜ್, ಬಿ. ಮಾರುತಿ, ಹನುಮಂತರಾಜು, ಬಿ.ಸಿ ಪ್ರಕಾಶ್, ಸಿ.ಜಿ. ಮಹದೇವಯ್ಯ, ಉಮೇಶ್ ಹುಲ್ಮನಿ, ಬಿ.ಹೆಚ್ ಅರುಣ್ಕುಮಾರ್ ಮತ್ತಿತರರು ಹಾಜರಿದ್ದರು.