ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕೆ ನಬಾರ್ಡ್ ನೆರವು

ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕೆ ನಬಾರ್ಡ್ ನೆರವು

ಜಗಳೂರು, ಡಿ.8- ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮತ್ತು  ರೈತರ ಅಭ್ಯುದಯಕ್ಕಾಗಿ ನಬಾರ್ಡ್ ಸಂಸ್ಥೆಯಿಂದ ವಿವಿಧ ಯೋಜನೆಗಳಿಗೆ ಆರ್ಥಿಕ ಸಹಾಯ ನೀಡಲಾಗುತ್ತಿದ್ದು, ಸದುಪಯೋಗ ಪಡೆದು ಕೊಳ್ಳಬೇಕು ಎಂದು ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ರಶ್ಮಿ ರೇಖಾ ತಿಳಿಸಿದರು.

ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಬಾರ್ಡ್ ಹಾಗೂ  ಕೆನರಾ ಬ್ಯಾಂಕ್ ಸಹಯೋಗದಲ್ಲಿ  ಹಮ್ಮಿಕೊಂಡಿದ್ದ ಮಹಿಳಾ ಸ್ವಸಹಾಯ ಸಂಘ ಮತ್ತು ರೈತರಿಗೆ ಆರ್ಥಿಕ ನೆರವು ಯೋಜನೆಗಳ ಕುರಿತು ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ರೈತರ ಹೊಲಗಳಲ್ಲಿ ಕೀಟನಾಶಕ ಸಿಂಪರಣೆ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಡ್ರೋನ್ ಬಳಕೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿದ್ದು, ಇದರಿಂದ ವೇಗವಾಗಿ ಮತ್ತು ಸುರಕ್ಷತೆಯಿಂವದ ಹೆಚ್ಚಿನ ಪ್ರದೇಶದಲ್ಲಿ ಔಷಧಿ ಸಿಂಪರಣೆ ಮಾಡಬಹುದಾಗಿದೆ. ಸ್ವಸಹಾಯ ಸಂಘಗಳಿಗೆ ಲಾಭದಾಯಕವಾಗಲಿದೆ ಎಂದರು.

ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಪ್ರಸ್ತುತ ಸಿಬಿಲ್ ಅತ್ಯಂತ ಮುಖ್ಯವಾ ಗಿದ್ದು,   ಬ್ಯಾಂಕ್‌ಗಳಲ್ಲಿ ವಹಿವಾಟು ಮಾಡುವ ರೈತರು ಸಕಾಲದಲ್ಲಿ ಸಾಲದ ನವೀಕರಣ ಅಥವಾ  ಮರುಪಾವತಿ  ಮಾಡುವ ಮೂಲಕ  ಸಿಬಿಲ್ ಸ್ಕೋರ್ ಕುಸಿಯದಂತೆ ಎಚ್ಚರ ವಹಿಸಬೇಕು ಎಂದು ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಹಣಮಂತ ಬೈರಗೊಂಡ ಹೇಳಿದರು.

ಬಿಸ್ತುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಣಿ ಶಶಿಕಾಂತ್, ಮುಖ್ಯಶಿಕ್ಷಕ ಶಾಮಣ್ಣ, ಮುಖಂಡರಾದ ಬಿಸ್ತುವಳ್ಳಿ ಬಾಬು, ಬಿ.ಟಿ. ಶ್ರೀನಿವಾಸ ರೆಡ್ಡಿ, ಲಕ್ಷ್ಮೀಪತಿ ಗೌಡ, ಜಯರಾಜ್, ಅನುರಾಧ , ಸೌಭಾಗ್ಯಲಕ್ಷ್ಮಿ ಇದ್ದರು.

error: Content is protected !!